ಕೋಡಿಂಬಾಳ: ಶಾಸಕ ಎಸ್ ಅಂಗಾರರವರಿಂದ ಮೂರಾಜೆ-ಪಟ್ನ-ಬೇರಿಕೆ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕೋಡಿಂಬಾಳ . 27: ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರ ರವರು ಸುಮಾರು 20 ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಂಡ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಮೂರಾಜೆ-ಪಟ್ನ-ಬೇರಿಕೆ ಮೂಲಕ ಕೋಡಿಂಬಾಳ ಸಂಪರ್ಕಿಸುವ ರಸ್ತೆಯನ್ನು ಕಳೆದ ದಿನ ಉದ್ಘಾಟಿಸಿದರು.

ಬಳಿಕ ಮಾತನಡಿದ ಶಾಸಕ ಎಸ್ ಅಂಗಾರ ರವರು ರಸ್ತೆ ಅಭಿವೃದ್ಧಿಗೆ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಇನ್ನಷ್ಟು ರಸ್ತೆಗಳು ಮೇಲ್ದರ್ಜೆರುವ ಮೂಲಕ ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು. ಇನ್ನು ಗ್ರಾಮಸ್ಥರ ಪ್ರಮುಖ ಬೇಡಿಕೆಗಳಲ್ಲಿ ಹೆಚ್ಚಿನದ್ದು ರಸ್ತೆಯೇ ಆಗಿದ್ದು, ಸೂಕ್ತ ಅನುದಾನ ಹೊಂದಿಸಿಕೊಂಡು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ, ಎಪಿಎಂಸಿ ಸದಸ್ಯೆ ಪುಲಸ್ಯ ರೈ, ಹರೀಶ್ ಕಂಜಿಪಿಲಿ, ಸತೀಶ್ ನಾಯ್ಕ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಜರಿದ್ದರು.

Also Read  SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

 

error: Content is protected !!
Scroll to Top