ಮಂಗಳೂರು : ಕದ್ರಿಯಲ್ಲಿ ಉಗ್ರ ಸಂಘಟನೆ ಲಷ್ಕರ್‌‌ ಪರ ಗೋಡೆ ಬರಹ

(ನ್ಯೂಸ್ ಕಡಬ) newskadaba.com ಮಂಗಳೂರು . 27: ಮಂಗಳೂರಿನಲ್ಲಿ ಕೆಲ ಕಿಡಿಗೇಡಿಗಳು ಉಗ್ರ ಸಂಘಟನೆಗಳ ಪರ ಗೋಡೆಗಳ ಮೇಲೆ ಬರಹಗಳನ್ನು ಬರೆದಿದ್ದಾರೆ .ಸರ್ಕ್ಯೂಟ್‌ಹೌಸ್ ರಸ್ತೆಯ ಅಪಾರ್ಟ್‌ಮೆಂಟ್ ಒಂದರ ಕಾಂಪೌಂಡ್‌ ಮೇಲೆ ಹ್ಯಾಷ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆಯಲಾಗಿದೆ. ಲಷ್ಕರ್ ಉಗ್ರರನ್ನು ಕರೆಸುವಂತೆ ನಮಗೆ ಒತ್ತಾಯ ಮಾಡಬೇಡಿ ಎಂದೆಲ್ಲಾ ಗೋಡೆಯಲ್ಲಿ ಬರೆಯಲಾಗಿದೆ.

 

 

 

ಇದು ಜನನಿಬಿಡ ರಸ್ತೆಯಾಗಿದ್ದು,  ಹತ್ತಿರದಲ್ಲೇ ಕದ್ರಿ ಪಾರ್ಕ್, ಕದ್ರಿ ಪೊಲೀಸ್ ಠಾಣೆಯಿದೆ.ಕಳೆದ ರಾತ್ರಿ ತಡರಾತ್ರಿ ಈ ವಿವಾದಾತ್ಮಕ ಬರಹ ಬರೆಯಲಾಗಿದೆ ಎನ್ನಲಾಗಿದ್ದು, ಸುದ್ದಿ ತಿಳಿದ ತಕ್ಷಣ ಕದ್ರಿ ಪೊಲೀಸರು ಆಗಮಿಸಿದ್ದು, ಸದ್ಯ ಪೊಲೀಸರು ವಿವಾದಿತ ಬರಹದ ಮೇಲೆ ಪೇಂಟಿಂಗ್ ಮಾಡಿಸಿದ್ದಾರೆ.ಆರೋಪಿಗಳ ಪತ್ತೆಗೆ ಕದ್ರಿ ಪೊಲೀಸರಿಂದ ಶೋಧಕಾರ್ಯ ಶುರು ಮಾಡಿದ್ದು ಬರಹವಿದ್ದ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ.

Also Read  ನೆಲ್ಯಾಡಿ: ರಸ್ತೆಗುರುಳಿದ ಕಂಟೇನರ್ ಲಾರಿ ➤ ಚಾಲಕನಿಗೆ ಗಾಯ

 

Xl

error: Content is protected !!
Scroll to Top