ಪಡಿತರ ವಿತರಣಾ ಕೇಂದ್ರ ಬದಲಾವಣೆಗೆ ಕುರಿತು ► ಆಹಾರ ಇಲಾಖೆ ಉಪನಿರ್ದೇಶಕರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ,ಅ.6, ಇಲ್ಲಿನ ಜಿ.ಪಂ.ಕ್ಷೇತ್ರಕ್ಕೆ ಬರುವ ಶಿರಾಡಿ, ಕೊಣಾಜೆ ಹಾಗೂ ಸಿರಿಬಾಗಿಲು ಗ್ರಾಮದ ಪಡಿತರ ಚೀಟಿದಾರರು ಪಡಿತರ ಸಾಮಾಗ್ರಿ ಪಡೆದುಕೊಳ್ಳಲು ತೊಂದರೆ ಅನುಭವಿಸುತ್ತಿದ್ದು ಇವರಿಗೆ ಅನುಕೂಲವಾಗುವಂತೆ ಪಡಿತರ ವಿತರಣಾ ಕೇಂದ್ರವನ್ನು ಬದಲಾವಣೆ ಮಾಡುವಂತೆ ಕಡಬ ಕ್ಷೇತ್ರದ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ರವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

ಶಿರಾಡಿ ಗ್ರಾಮದ ಕಳಪ್ಪಾರು ವಾರ್ಡ್ನ ಸುಮಾರು 350 ಪಡಿತರ ಚೀಟಿದಾರರು ಪಡಿತರ ಸಾಮಾಗ್ರಿ ಪಡೆದುಕೊಳ್ಳಲು 6ರಿಂದ 8 ಕಿ.ಮೀ.ದೂರದ ಶಿರಾಡಿ ಕೇಂದ್ರಕ್ಕೆ ಬರಬೇಕಾಗಿದ್ದು ಇವರಿಗೆ ಅನುಕೂಲವಾಗುವಂತೆ ಕಳಪ್ಪಾರಿನಲ್ಲೇ ಪಡಿತರ ಸಾಮಾಗ್ರಿ ವಿತರಣೆ ಆರಂಭಿಸಬೇಕು. ಅಲ್ಲದೇ ಕೊಣಾಜೆ ಗ್ರಾಮದ ಪುತ್ತಿಗೆ ವಾರ್ಡ್ನ ಸುಮಾರು 200 ಪಡಿತರ ಚೀಟಿದಾರರು ಹಾಗೂ ಸಿರಿಬಾಗಿಲು ಗ್ರಾಮದ ಸುಮಾರು 300 ಪಡಿತರ ಚೀಟಿದಾರರು ಸಹ ಶಿರಾಡಿ ಕೇಂದ್ರಕ್ಕೆ ಬಂದು ಪಡಿತರ ಸಾಮಾಗ್ರಿ ಪಡೆದುಕೊಳ್ಳಬೇಕಾಗಿದೆ. ಈ ಎರಡೂ ವಾರ್ಡ್ನವರಿಗೆ ಅನುಕೂಲವಾಗುವಂತೆ ಉದನೆ ಹಾಗೂ ಗುಂಡ್ಯದಲ್ಲಿ ಪಡಿತರ ವಿತರಣಾ ಕೇಂದ್ರ ಆರಂಭಿಸಬೇಕೆಂದು ಪಿ.ಪಿ.ವರ್ಗೀಸ್ರವರು ಮನವಿ ಮಾಡಿದ್ದಾರೆ. ಈ ಬಗ್ಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ರವರಿಗೂ ಮನವಿ ಮಾಡಿದ್ದು ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮ ಮನವಿಯಂತೆ ಪಡಿತರ ವಿತರಣಾ ಕೇಂದ್ರಗಳ ಮಾರ್ಪಡು ಮಾಡುವಂತೆ ಅವರು
ವಿನಂತಿಸಿದ್ದಾರೆ.

error: Content is protected !!
Scroll to Top