(ನ್ಯೂಸ್ ಕಡಬ) newskadaba.com ಮಂಗಳೂರು ನ. 26: ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ನೇತೃತ್ವದಲ್ಲಿ ಘಟಕಾಧಿಕಾರಿಗಳ ಸಭೆಯನ್ನು ನ.26 ರ ಇಂದು ನಡೆಸಲಾಯಿತು. ಮುಂಬರುವ ಗ್ರಾಮ ಪಂಚಾಯತ್ ಚುನಾವಣಾ ಪೂರ್ವ ಸಿದ್ಧತೆ ಬಗ್ಗೆ ಹಾಗೂ ಗೃಹರಕ್ಷಕ ದಿನಾಚರಣೆ ಆಚರಿಸುವ ಬಗ್ಗೆ ಚರ್ಚಿಸಲಾಯಿತು.
ಬಾಕಿ ಇರುವ ಗೃಹರಕ್ಷಕರ ನವೀಕರಣ ಕಡ್ಡಾಯವಾಗಿ ಮಾಡುವಂತೆ ಸೂಚಿಸಲಾಯಿತು. ಗೃಹರಕ್ಷಕ ಕ್ಷೇಮಾಭಿವೃದ್ಧಿ ನಿಧಿಗೆ ವಂತಿಗೆಯನ್ನು ಕಟ್ಟಲು ಬಾಕಿ ಇರುವ ಗೃಹರಕ್ಷಕರಿಂದ ಸಂಗ್ರಹಿಸಿ ಕಛೇರಿಗೆ ಹಸ್ತಾಂತರಿಸಲು ಸೂಚಿಸಲಾಯಿತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ ಸಮಾದೇಷ್ಟರಾದ ಶ್ರೀ ರಮೇಶ್ ಸ್ವಾಗತಿಸಿದರು. ಸುಳ್ಯ ಘಟಕಾಧಿಕಾರಿ ಶ್ರೀ ಜಯಂತ್ ಶೆಟ್ಟಿ ವಂದಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್ ಶೇರ್, ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮನ್ಯು ರೈ, ಸುಬ್ರಹ್ಮಣ್ಯ ಘಟಕಾಧಿಕಾರಿ ನಾರಾಯಣ, ಸುಳ್ಯ ಘಟಕದ ಘಟಕಾಧಿಕಾರಿ ಜಯಂತ್ ಶೆಟ್ಟಿ, ಉಳ್ಳಾಲ ಪ್ರಭಾರ ಘಟಕಾಧಿಕಾರಿ ಸುರೇಶ್ ಶೇಟ್, ಮೂಡಬಿದ್ರೆಯ ಪ್ರಭಾರ ಘಟಕಾಧಿಕಾರಿ ಪಾಂಡಿರಾಜ್, ಉಪ್ಪಿನಂಗಡಿಯ ಪ್ರಭಾರ ಘಟಕಾಧಿಕಾರಿ ದಿನೇಶ್ ಬಿ., ಪಣಂಬೂರು ಪ್ರಭಾರ ಘಟಕಾಧಿಕಾರಿ ಶಿವಪ್ಪ ನಾಯಕ್, ಸುರತ್ಕಲ್ ಪ್ರಭಾರ ಘಟಕಾಧಿಕಾರಿ ರಮೇಶ್, ಬೆಳ್ಳಾರೆಯ ಪ್ರಭಾರ ಘಟಕಾಧಿಕಾರಿ ವಸಂತ್, ಕಡಬ ಪ್ರಭಾರ ಘಟಕಾಧಿಕಾರಿ ತೀರ್ಥೇಶ್, ಬಂಟ್ವಾಳ ಪ್ರಭಾರ ಘಟಕಾಧಿಕಾರಿ ಐತಪ್ಪ, ಬೆಳ್ತಂಗಡಿಯ ಪ್ರಭಾರ ಘಟಕಾಧಿಕಾರಿ ಜಯಾನಂದ, ಮೂಲ್ಕಿ ಪ್ರಭಾರ ಘಟಕಾಧಿಕಾರಿ ಲೋಕೇಶ್, ವಿಟ್ಲ ಪ್ರಭಾರ ಘಟಕಾಧಿಕಾರಿ ಸಂಜೀವ ಹಾಗೂ ಕಛೇರಿ ಅಧೀಕ್ಷಕರಾದ ಶ್ರೀ ರತ್ನಾಕರ್ ಮತ್ತು ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್. ಉಪಸ್ಥಿತರಿದ್ದರು.