ಶ್ರೀ ಕೃಷ್ಣಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿ ➤ ಶ್ರೀ ಪಾದರಿಂದ ಭಕ್ತರಿಗೆ ತಪ್ತ ಮುದ್ರಾಧಾರಣೆ

(ನ್ಯೂಸ್ ಕಡಬ) newskadaba.com ಉಡುಪಿ ನ. 26: ಶ್ರೀಕೃಷ್ಣಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿ ದಿನವಾದ ದೇವಪ್ರಬೋಧಿನಿ ಏಕಾದಶಿಯಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ತಪ್ತಮುದ್ರಾಧಾರಣೆ ನಡೆಯಿತು.

ಪರ್ಯಾಯ ಮಠದ ಪುರೋಹಿತ ಮುದರಂಗಡಿ ಲಕ್ಷ್ಮೀಶ ಆಚಾರ್ಯರು ಸುದರ್ಶನ ಹೋಮದ ಪೂರ್ಣಾಹುತಿ ನಡೆಸಿದರು. ಪೇಜಾವರ ಶ್ರೀಪಾದರು ತಾವೇ ಮುದ್ರಾಧಾರಣೆ ಮಾಡಿಕೊಂಡು ಪರ್ಯಾಯ ಶ್ರೀಪಾದರಿಗೆ ಮುದ್ರಾಧಾರಣೆ ಮಾಡಿದರು. ನಂತರ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿದರು.

Also Read  ಬೈಕ್- ಅಟೋ‌ರಿಕ್ಷಾ ನಡುವೆ ಢಿಕ್ಕಿ ➤ ಸವಾರನಿಗೆ ಗಾಯ

 

 

error: Content is protected !!
Scroll to Top