ಸುಳ್ಯ: ಶಾಸಕ ಎಸ್. ಅಂಗಾರರವರಿಗೆ ಮಂತ್ರಿ ಸ್ಥಾನ ನೀಡಲು ಪ್ರಧಾನಿಗೆ ಪತ್ರ ಬರೆದ ನೀರಜಾಕ್ಷಿ ಕೆ.ಕೆ ನಾಯ್ಕ್

(ನ್ಯೂಸ್ ಕಡಬ) newskadaba.com ಸುಳ್ಯ . 26: ಕೊಡಿಯಾಲದ ನೀರಜಾಕ್ಷಿ ಕೆ.ಕೆ ನಾಯ್ಕ್ ರವರು ಸುಳ್ಯ ಶಾಸಕ ಎಸ್. ಅಂಗಾರರವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.

 

 

ಮೂಲ ಸೌಕರ್ಯದಿಂದ ವಂಚಿತರಾಗಿದ್ದ ತಾಲೂಕಿನಲ್ಲಿ ಶಾಸಕ ಎಸ್.ಅಂಗಾರ ರವರ ನೇತೃತ್ವದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಸುಳ್ಯ ತಾಲೂಕಿನ ತೀರಾ ಹಿಂದುಳಿದ ಗ್ರಾಮವಾದ ಕೊಡಿಯಾಲ ಗ್ರಾಮದಲ್ಲಿ ವಾಸಿಸುತ್ತಿದ್ದು, ತಮ್ಮ ಆತ್ಮನಿರ್ಭರ ಭಾರತ ಯೋಜನೆಯಿಂದ ಪ್ರೇರಿತಲಾಗಿದ್ದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿದ್ದೇನೆ. ತಾಲೂಕು ಇನ್ನಷ್ಟು ಪ್ರಗತಿಯಾಗಬೇಕಿದೆ. ಅಭಿವೃದ್ಧಿ ವೇಗಕ್ಕಾಗಿ ಕ್ಷೇತ್ರದ ಶಾಸಕರಾದ ಎಸ್.ಅಂಗಾರರವರನ್ನು ಮಂತ್ರಿಯಾಗಿಸಿದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಪೂರಕವಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Also Read  ಹಿರಿಯ ನಟಿ ಕವಿತಾ ಅವರ ಪತಿ-ಪುತ್ರ ಇಬ್ಬರು ಕೊರೊನಾ ಸೋಂಕಿಗೆ ಬಲಿ

 

error: Content is protected !!
Scroll to Top