(ನ್ಯೂಸ್ ಕಡಬ) newskadaba.com ನೆಲ್ಯಾಡಿ,ಅ.6. ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿಯ ಫೆಡರಲ್ ಬ್ಯಾಂಕ್ ಬಳಿಯಿರುವ ಭಾರತ್ ಪೆಟ್ರೋಲ್ ಪಂಪ್ನ ಬಳಿ ಶೈನ್ ವಾಯುಮಾಲಿನ್ಯ ತಪಾಸಣಾ ಕೇಂದ್ರ ಇತ್ತೀಚೆಗೆ ಶುಭಾರಂಭಗೊಂಡಿತು.
ಕೊಕ್ಕಡ ಸಂತಜಾನ್ ಬ್ಯಾಪ್ಟಿಸ್ಟ್ ಚರ್ಚ್ನ ಧರ್ಮಗುರು ರೆ.ಫಾ.ಪೆಡ್ರಿಕ್ ಮೊಂತೆರೋರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಭಾರತ್ ಪೆಟ್ರೋಲ್ ಬಂಕ್ ಮಾಲಕ ಕುಶಾಲಪ್ಪ ಗೌಡ ಪೂವಾಜೆ ರಿಬ್ಬನ್ ಕಟ್ ಮಾಡಿದರು. ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ಸದಸ್ಯೆ ಪ್ಲೋರಿನಾ ಡಿ.ಸೋಜ, ವಾಳ್ಯದ ಗುರಿಕಾರ ಚಾಲ್ರ್ಸ್ ಡಿ.ಸೋಜ, ಸಿಸ್ಟರ್ ಎಲಿಜಬೆತ್ ಮತ್ತಿತರರು ಭೇಟಿ ನೀಡಿ ಶುಭಹಾರೈಸಿದರು.
ಅತಿಥಿಗಳನ್ನು ಬರಮಾಡಿಕೊಂಡು ಮಾತನಾಡಿದ ಮಾಲಕ ಸುಜನ್ ಡಿ.ಸೋಜರವರು, ನಮ್ಮಲ್ಲಿ ಎಲ್ಲಾ ವಾಹನಗಳ ವಾಯು ಮಾಲಿನ್ಯ ತಪಾಸಣೆ, ಇನ್ಸೂರೆನ್ಸ್ ಮಾಡಿಕೊಡಲಾಗುವುದು. ಇನ್ಸೂರೆನ್ಸ್ ಪ್ರೀಮಿಯಂ ಸಹ ಸಂಗ್ರಹಿಸಲಾಗುವುದು ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.