ಕುಂದಾಪುರ :ಮಿನಿ ಟಿಪ್ಪರ್ ಕದ್ದು ಪರಾರಿಯಾದ ಚಾಲಕನ ಬಂಧನ

(ನ್ಯೂಸ್ ಕಡಬ) newskadaba.com ಕುಂದಾಪುರ . 26: ಮಿನಿ ಟಿಪ್ಪರ್ ವಾಹನ ಕದ್ದು ಪರಾರಿಯಾದ ಚಾಲಕನನ್ನು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು ಟಿಪ್ಪರ್ ವಶಕ್ಕೆ ಪಡೆಯಲಾಗಿದೆ. ನ. 20 ರಂದು 12-30 ಗಂಟೆಯ ಸುಮಾರಿಗೆ ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ನಿವಾಸಿ ಉಸ್ಮಾನ್‌‌ ಎನ್ನುವರಿಗೆ ಸೇರಿದ ರೂ. 9 ಲಕ್ಷ ಮೌಲ್ಯದ ಟಾಟಾ ಮಿನಿ ಟಿಪ್ಪರ್ ವಾಹನವು ಕಳವಾಗಿದ್ದು ಈ ಟಿಪ್ಪರ್ ಓಡಿಸುತ್ತಿದ್ದ ಚಾಲಕ ಪರುಶುರಾಮ ಎನ್ನುವಾತನ ಮೇಲೆ ಸಂಶಯ ವ್ಯಕ್ತಪಡಿಸಿ ಉಸ್ಮಾನ್ ಪೊಲೀಸರಿಗೆ ದೂರು ನೀಡಿದ್ದರು.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌‌ಐ ರಾಜಕುಮಾರ್‌ ಹಾಗೂ ಅಪರಾಧ ಪತ್ತೆ ವಿಭಾಗದ ಪಿಎಸ್‌ಐ ಸುಧಾ ಪ್ರಭು ಯು. ಇವರ ಸೂಚನೆಯಂತೆ, ಮಾಹಿತಿ ಸಂಗ್ರಹಿಸಿ ಠಾಣಾ ಅಪರಾಧ ಪತ್ತೆ ವಿಭಾಗ ಸಿಬ್ಬಂದಿಗಳು ಧಾರವಾಡದ ಜುಬಿಲಿ ಸರ್ಕಲ್ ಬಳಿ ಟಿಪ್ಪರ್ ವಾಹನವನ್ನು ಪತ್ತೆ ಹಚ್ಚಿ ಸ್ವಾಧೀನಪಡಿಸಿಕೊಂಡಿದ್ದಾರೆ. ಹಾಗೂ ಆರೋಪಿ ಬಾಗಲಕೋಟೆಯಲ್ಲಿ ಮಾರಾಟ ಮಾಡಿದ್ದ ವಾಹನದ ಬಿಡಿ ಭಾಗಗಳಾದ ಟಯರ್‌‌ ಹಾಗೂ ಹಿಂಬದಿ ಡೋರ್‌‌ನ್ನು ವಶಕ್ಕೆ ಪಡೆಯಲಾಗಿದೆ. ಉಡುಪಿ ಜಿಲ್ಲಾ ಪೊಲಿಸ್ ಅಧೀಕ್ಷಕವಿಷ್ಣುವರ್ಧನ್‌‌ ಆದೇಶದಂತೆ ಕುಂದಾಪುರ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಸುಳ್ಯದ ಯುವಕ ಬೆಂಗಳೂರಿನಲ್ಲಿ ಮಹಡಿಯಿಂದ ಬಿದ್ದು ಮೃತ್ಯು!

 

 

error: Content is protected !!
Scroll to Top