ಪೋಕ್ಸೊ ಮತ್ತು ಸೈಬರ್ ಕ್ರೈಮ್ ಕಾಯಿದೆಯ ಕುರಿತು ಮಾಹಿತಿ ಕಾರ್ಯಾಗಾರ

(ನ್ಯೂಸ್ ಕಡಬ) newskadaba.com ಮಂಗಳೂರು . 26: ಡಾ. ಪಿ.ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ, ಇಲ್ಲಿಯ ಐ.ಕ್ಯೂ.ಎ.ಸಿ. ಮತ್ತು ಎನ್.ಎಸ್.ಎಸ್‍ ಘಟಕ ಹಾಗೂ ಲಯನ್ಸ್ ಕಬ್ಲ್ ಮಂಗಳಾದೇವಿ ಇವುಗಳ ಜಂಟಿ ಆಶ್ರಯದಲ್ಲಿ ಪೋಕ್ಸೋ ಕಾಯಿದೆಯ ಕುರಿತು ಕಾನೂನು ಮಾಹಿತಿ ಕಾರ್ಯಕ್ರಮವು ಜರುಗಿತು.

ಇತೀಚೆಗೆ ನಗರದ ಕಾರ್‍ಸ್ಟ್ರೀಟ್‍ನ ಕಾಲೇಜಿನಲ್ಲಿ ಜಿಲ್ಲಾ ಕಾನೂನು ವೇದಿಕೆಯ ಅಧ್ಯಕ್ಷರು ಹಾಗೂ ವಕೀಲ ಎಸ್.ಪಿ ಚಂಗಪ್ಪರವರು ಉದ್ಘಾಟಿಸಿ ಮಾತನಾಡಿ, ಕಾನೂನು ವ್ಯಕ್ತಿಯ ಹುಟ್ಟಿನಿಂದ ಸಾಯುವವರೆಗೆ ರಕ್ಷಣೆಯ ನೆಲೆಯಾಗಿದೆ. ಯುವಜನರು ಸಾಮಾನ್ಯವಾದ ಕಾನೂನಿನ ಜ್ಞಾನವನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ.ಬದುಕಿನ ಪ್ರತಿಯೊಂದು ಕ್ಷಣಗಳು ಕಾನೂನಿನ ಸಹಾಯದಿಂದ ಮುನ್ನಡೆಯುತ್ತಿದೆ.ಭ್ರೂಣಹತ್ಯೆ ನಿಷೇಧಕಾಯಿದೆ, ವಿವಾಹ ಕಾಯ್ದೆ, ವಿಶ್ವವಿದ್ಯಾನಿಲಯ ಶಿಕ್ಷಣ ಕಾಯ್ದೆ, ಕಡ್ಡಾಯ ಶಿಕ್ಷಣ ಕಾಯ್ದೆ, ಬಾಲ ಕಾರ್ಮಿಕ ನಿಷೇಧಕಾಯ್ದೆ, ಮೊದಲಾದ ಕಾಯ್ದೆಗಳ ಕುರಿತು ಮಾಹಿತಿಯನ್ನು ನೀಡಿದರು.

Also Read  ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು 11 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

ಕಾಲೇಜಿನಮುಖ್ಯ ಶೈಕ್ಷಣಿಕ ಸಲಹೆಗಾರ ಡಾ.ಶಿವರಾಮಂ ಪಿ ಮಾತನಾಡಿ, ವಿದ್ಯಾರ್ಥಿಗಳು ಪ್ರಸ್ತುತ ಸಮಾಜದಲ್ಲಿ ಕಾನೂನಿನ ಮಾಹಿತಿ ಜ್ಞಾನವನ್ನು ಸಂಪೂರ್ಣ ತಿಳಿಯದೆ ಜೀವನವೇ ದ್ವಂದ್ವ ರೀತಿಯಲ್ಲಿ ನಡೆಯುವಂತಾಗಿದೆ.ಯುವ ಸಮುದಾಯಗಳು ದೇಶದ ಕಾನೂನಿನ ಚೌಕಟನ್ನು ಸರಿಯಾಗಿ ಅರ್ಥೈಸಿಕೊಳ್ಳುವಂತವರಾಗ ಬೇಕೆಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ ಹೆಬ್ಬಾರ್ ಸಿ, ಲಯನ್ಸ್ ಕಬ್ಲ್ ಮಂಗಳಾದೇವಿ ಇದರ ಅಧ್ಯಕ್ಷ ಚಂದ್ರಹಾಸ. ಲಯನ್ಸ್ ಕಬ್ಲ್ ನ ಕೋಶಾಧಿಕಾರಿ ಪ್ರದೀಪ್ ಶೆಟ್ಟಿ, ಪದಾಧಿಕಾರಿಗಳಾದ ರಘುರಾಮ ರೈ ಮತ್ತು ಆನಂದ ಶೆಟ್ಟಿ ಸಿ,ಐ.ಕ್ಯೂ.ಎ.ಸಿ.ಸಂಯೋಜಕರು ಹಾಗೂ ಎನ್.ಎಸ್.ಎಸ್ ಅಧಿಕಾರಿಗಳಾದ ಡಾ.ತೆರೆಜ್ ಪಿರೇರಾ, ಪ್ರೊ. ಅರುಣಕುಮಾರಿ, ಪ್ರೊ.ತ್ರಿಶಾಂತ್‍ ಮತ್ತಿತರರು ಉಪಸ್ಥಿತರಿದ್ದರು.

Also Read  ಗೋಶಾಲೆಗಳಿಗೆ ಸಹಾಯಧನ: ಅರ್ಜಿ ಆಹ್ವಾನ

 

 

error: Content is protected !!
Scroll to Top