ಗೆಲುವು ಅಭಿವೃದ್ದಿ ಯೇ ಪಕ್ಷದ ಗುರಿ ► ಡಿ.ಎಸ್.ವೀರಯ್ಯ

(ನ್ಯೂಸ್ ಕಡಬ) newskadaba.com ಕಡಬ,ಅ.6. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರವೇರಲಿದೆ. ಮುಂದಿನ ಆರು ತಿಂಗಳಲ್ಲಿ ಪಕ್ಷದ ಕಾರ್ಯಕರ್ತರು ನಿರಂತರವಾಗಿ ಮತದಾರರ ಮನೆ ಬಾಗಲಿಗೆ ಬರುತ್ತಾರೆ. ಗೆಲುವು ಅಭಿವೃದ್ದಿ ಯೇ ಪಕ್ಷದ ಗುರಿ ಎಂದು ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಹೇಳಿದರು.

ಆಲಂಕಾರು ಪ್ರಾಥಮಿಕ ಸಹಕಾರಿ ಸಂಘದ ಸಭಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ಆಡಳಿತವನ್ನು ಜನ ತಿರಸ್ಕರಿಸುತ್ತಾರೆ ಎನ್ನುವ ಛಲ ನಂಬಿಕೆ ನಮಗಿದೆ. ರಾಜ್ಯ ಭ್ರಷ್ಟಚಾರ, ಅನಾಗರಿಕತೆ ತಾಂಡವಾಡುತ್ತಿದೆ. ಕೆಲವೋಂದು ವರ್ಗಕ್ಕೆ ಮೀಸಲಾಗಿ ಯೋಜನೆಗಳನ್ನು ಜಾರಿಗೆ ತಂದು ವೊಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಇದೆಲ್ಲವು ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರಿಗೆ ತಿರುಗುಬಾಣವಾಗಲಿದೆ. ಅಕ್ಟೋಬರ್ 15 ರಿಂದ ಜನರ ಬಳಿಗೆ ಪಕ್ಷದ ಕಾರ್ಯಕರ್ತರು ತೆರಳುವ ಕಾರ್ಯ ಆರಂಭವಾಗಲಿದೆ. ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಈಶ್ವರಪ್ಪ ನಡುವೆ ಯಾವೂದೆ ಬಿನ್ನಾಭಿಪ್ರಾಯವಿಲ್ಲ ಒಗ್ಗಟ್ಟಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಈ ಬಗ್ಗೆ ತಲಮಟ್ಟದ ಕಾರ್ಯಕರ್ತರು ಯಾವೂದೆ ಗೊಂದಲ ಬೇಡ. ಎಲ್ಲವೂ ಹೈಕಮಾಂಡ್ ನಿರ್ಧಾರ ಅವರ ಅನತಿಯಂತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಕೊಳ್ಳಲಾಗುವುದು. ಹಿಂದುಳಿದ ವರ್ಗಗಳ ಮೂಲಭೂತ ಸಮಸ್ಯೆಗಳಿಗೆ ರಾಜ್ಯದಲ್ಲಿ ಯಾವೂದೆ ಸ್ಪಂದನೆ ದೊರೆತಿಲ್ಲ. ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಹಣ ಮೀಸಲಿಟ್ಟರೂ ಅದನ್ನು ಖರ್ಚು ಮಾಡುತ್ತಿಲ್ಲ. ಕೇವಲ ಪ್ರಚಾರಕಷ್ಟೆ ಸೀಮಿತವಾಗಿದೆ. ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವ ಮೊದಲಾದ ಯೋಜನೆ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ. ಇನ್ನೇನು ಆರು ತಿಂಗಳ ಅವಧಿಯಲ್ಲಿ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಲು ಸಾದ್ಯವೆ ಎಂದು ಪ್ರಶ್ನಿಸಿದರು.

ಈ ಸಂದರ್ಭ ಎಸ್ಸಿ ಮೋರ್ಚಾ ಕೊಡುಗು ಜಿಲ್ಲಾಧ್ಯಕ್ಷ ಸತೀಶ್ , ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ನಾಗರಾಜ ಮಲ್ಲಡಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ, ಉಪಾಧ್ಯಕ್ಷ ರಮೇಶ್ ಎನ್ ಸಿ, ನಿರ್ದೇಶಕರಾದ ಜಯಕರ ಪುಜಾರಿ, ಪುವಪ್ಪ ನಾೖಕ್ ಮೊದಲಾದವರು ಇದ್ದರು. ಈ ಸಂದರ್ಭದಲ್ಲಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಅವರನ್ನು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ರಮೇಶ್ ಉಪ್ಪಂಗಳ, ಉಪಾಧ್ಯಕ್ಷ ರಮೇಶ್ ಎನ್ ಸಿ, ನಿರ್ದೇಶಕರು ಗೌರವಿಸಿದರು.

error: Content is protected !!
Scroll to Top