ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಳಸಿ ಪೂಜೆ

(ನ್ಯೂಸ್ ಕಡಬ) newskadaba.com ಪುತ್ತೂರು . 26: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ತುಳಸಿ ಪೂಜೆ ಕಾರ್ಯಕ್ರಮ ನಡೆಯಿತು.

 

Xl

 

ದೇವಳದ ಪ್ರಧಾನ ಅರ್ಚಕ ವಸಂತ ಕುಮಾರ್ ಕೆದಿಲಾಯ ಅವರ ನೇತೃತ್ವದಲ್ಲಿ ದೇವಳದ ಬೆಳಗ್ಗಿನ ಪೂಜೆ, ನಿತ್ಯ ಬಲಿ ಉತ್ಸವದ ಬಳಿಕ ದೇವಳದ ಒಳಾಂಗಣದಲ್ಲಿರುವ ಮಾವಿನ ಎಲೆ ಮತ್ತು ಹೂವಿನಿಂದ ಅಲಂಕೃತಗೊಂಡ ತುಳಸಿ ಕಟ್ಟೆಯಲ್ಲಿ ತುಳಸಿ ಪೂಜೆ ನಡೆಯಿತು. ತುಳಸಿಗೆ ಹಾಲು, ಪಂಚಾಮೃತ ಅಭಿಷೇಕ, ಸುವಸ್ತುಗಳ ಸಮರ್ಪಣೆ ಮಾಡಿ ಪೂಜೆ ಮಾಡಲಾಯಿತು. ಪೂಜಾ ಸಂದರ್ಭದಲ್ಲಿ ದೇವಳದ ಭಕ್ತರು ಉಪಸ್ಥಿತರಿದ್ದರು.

 

Also Read  ಸುಳ್ಯ; ಜಿ.ಪಂ. ಮಾಜಿ ಸದಸ್ಯ ನವೀನ್ ರೈ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಮೃತ್ಯು

error: Content is protected !!
Scroll to Top