ಮಾಜಿ ಫುಟ್ ಬಾಲ್ ಆಟಗಾರ ಡಿಗೊ ಮರುಡೋನಾ ನಿಧನ

(ನ್ಯೂಸ್ ಕಡಬ) newskadaba.com  . 26: ಫುಟ್ ಬಾಲ್ ದಂತಕಥೆ ಎಂದೇ ಪ್ರಸಿದ್ಧಿ ಪಡೆದಿರುವ ಅರ್ಜೆಂಟೀನಾ ದೇಶದ ಮಾಜಿ ಆಟಗಾರ ಡಿಗೊ ಮರುಡೋನಾ ರವರು ಹಲವು ವರ್ಷಗಳಿಂದ ಅಸೌಖ್ಯದಿಂದ ಅವರು ಕಳೆದ ದಿನ ಹೃದಯಾಘಾತದಿಂದ ನಿಧನರಾಗಿದ್ದಾರೆ.

 

 

ಅರ್ಜೆಂಟೀನಾ ರಾಷ್ಟ್ರೀಯ ಫುಟ್ ಬಾಲ್ ತಂಡಕ್ಕೆ ತಮ್ಮ ಹದಿನಾರನೇ ವಯಸ್ಸಿನಲ್ಲಿ, ಹಂಗೇರಿ ದೇಶದ ವಿರುದ್ಧ ಆಡುವುದರ ಮೂಲಕ ಪಾದಾರ್ಪಣೆ ಮಾಡಿದರು. ಆ ಬಳಿಕ ಅವರು ದೇಶದ ತಂಡದಲ್ಲಿ ಸ್ಥಾನ ಪಡೆದರು. 15 ನೇ ವಯಸ್ಸಿನ ಮೆರೆಡೋನ ಅರ್ಜೆಂಟಿನೋಸ್ ಜೂನಿಯರ್ಸ್ ತಂಡದಲ್ಲಿ ಪಾದಾರ್ಪಣೆ ಮಾಡಿ 1976 ರಿಂದ 1981 ರವರೆಗೂ ಅಲ್ಲೇ ಆಡುತ್ತಿದ್ದರು. ಒಟ್ಟು 4 ವಲ್ರ್ಟ್ ಕಪ್ ಸರಣಿಗಳಲ್ಲಿ ಭಾಗವಹಿಸಿ, 1986 ರಲ್ಲಿ ತಂಡದ ಮುಂದಾಳತ್ವವನ್ನು ವಹಿಸಿ ಅಂತಿಮ ಸುತ್ತಿನಲ್ಲಿ ಪಶ್ಚಿಮ ಜರ್ಮನಿಯನ್ನು ಸದೆಬಡಿದು, ಸರಣಿ ಶ್ರೇಷ್ಠ ಆಟಗಾರರೆಂದು “ಗೋಲ್ಡನ್ ಬಾಲ್” ಪ್ರಶಸ್ತಿಯನ್ನು ಪಡೆದಿದ್ದರು.

Also Read  ಮಧ್ಯಾಹ್ನದ ಬಿಸಿಯೂಟದಲ್ಲಿ ʻಗೋಸುಂಬೆʼ ಪತ್ತೆ.!➤ ಐವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರ

 

Xl

error: Content is protected !!
Scroll to Top