ಮಂಗಳೂರು: ಅಶ್ಲೀಲ ಫೋಟೊ ವೈರಲ್ ಬೆದರಿಕೆ ➤ ಕಿಲಾಡಿ ಆರೋಪಿಗಳಿಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು . 25: ಫೇಸ್ಬುಕ್ ನಲ್ಲಿ ಮಹಿಳೆಯರ ಹೆಸರಿನಲ್ಲಿ ಖಾತೆ ತೆರೆದು ನಗರದ ಕೆಪಿಟಿಯ ವ್ಯಕ್ತಿಯನ್ನು ವಂಚಿಸಿದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಸಾಕ್ಷಿ ರಾಜ್ ಹೆಸರಿನಲ್ಲಿ ಖಾತೆ ತೆರೆದ ಆರೋಪಿಗಳು ಕೆಪಿಟಿ ಯ ರಾಜೇಶ್ ಎಂಬವರಿಗೆ ಮೆಸೇಜ್ ಮಾಡಿ ಮಹಿಳೆಯ ಅಶ್ಲೀಲ ಫೋಟೊಗಳನ್ನು ರವಾನಿಸಿದ್ದರು.

ಅಲ್ಲದೆ, ರಾಜೇಶ್ ಅವರಲ್ಲೂ ತಮ್ಮ ಅಶ್ಲೀಲ ಫೋಟೊ ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ಮಹಿಳೆಯೇ ಇರಬೇಕೆಂದು ನಂಬಿ ರಾಜೇಶ್ ತನ್ನ ಅಶ್ಲೀಲ ಫೋಟೊಗಳನ್ನೂ ಫೇಸ್ಬುಕ್ ಮೆಸೆಂಜರ್ ಮೂಲಕ ರವಾನಿಸಿದ್ದಾರೆ. ನಂತರ ತನ್ನ ಅಸಲಿ ರೂಪ ತೋರ್ಪಡಿಸಿದ ಆರೋಪಿಗಳು ಫೋಟೊಗಳನ್ನು ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ರಾಜೇಶ್ ಅವರಿಂದ ಹಣ ಪೀಕಿಸಿದ್ದಾರೆ.ಇದರಿಂದ ಬೆಸತ್ತ ರಾಜೇಶ್ ಸೈಬರ್ ಕೈಮ್ ಮೊರೆ ಹೋಗಿದ್ದಾರೆ. ಪೊಲೀಸರು ಇದೀಗಾ ಬೆಂಗಳೂರು ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಗೋಕುಲ್ ರಾಜ್ (20), ಪವನ್ (20) ಬಂಧಿತರು.ಸದ್ಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

Also Read  ಜಿ.ಟಿ.ಟಿ.ಸಿ. ಡಿಪ್ಲೋಮಾ ಕೋರ್ಸ್ ಗಳ ಪ್ರವೇಶ - ಅರ್ಜಿ ಆಹ್ವಾನ

error: Content is protected !!
Scroll to Top