ಚರಂಡಿಯಲ್ಲಿ ಹೂತುಹೋದ ಕಂಟೈನರ್ ➤ ಹೆದ್ದಾರಿ ಸಂಚಾರ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಮಂಗಳೂರು . 25: ರಾ.ಹೆ. 66 ಪಡುಪಣಂಬೂರು ಬಳಿ ಕಂಟೈನರ್ ಚರಂಡಿಯಲ್ಲಿ ಹೂತು ಹೋಗಿ ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.

Xl

 

ಬೈಕಂಪಾಡಿಯಿಂದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿಯ ಗೋಡೌನ್ ನಲ್ಲಿ ಸರಕು ಲೋಡ್ ಮಾಡಲು ಹೆದ್ದಾರಿಯಿಂದ ಒಳಗಡೆ ಕಂಟೈನರ್ ಹೋಗಲು ಯತ್ನಿಸಿದಾಗ ಇಕ್ಕಟ್ಟಾದ ರಸ್ತೆಯಲ್ಲಿ ಚಕ್ರ ಹೂತುಹೋಗಿವೆ. ಈ ಸಂದರ್ಭ ಕಂಟೈನರ್ ಹಿಂಭಾಗ ರಸ್ತೆಗೆ ತಾಗಿ ಜಖಂಗೊಂಡಿದೆ. ಕಂಟೈನರ್ ಹೂತುಹೋದ ಪರಿಣಾಮ ಅರ್ಧಭಾಗ ಹೆದ್ದಾರಿಯಲ್ಲಿ ಉಳಿದಿದೆ. ಇದರಿಂದಾಗಿ ಮಂಗಳೂರಿನಿಂದ ಉಡುಪಿ ಕಡೆಗೆ ಹೆದ್ದಾರಿ ಸಂಚಾರ ಭಾಗಶಃ ಅಸ್ತವ್ಯಸ್ತಗೊಂಡಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಬೃಹತ್ ಕಂಟೈನರ್ ಚಲಿಸಲು ಯತ್ನಿಸಿದ್ದು ಅಪಘಾತಕ್ಕೆ ಕಾರಣವಾಗಿದೆ. ಬಳಿಕ ಕ್ರೇನ್ ಮೂಲಕ ತೆರವು ಗೊಳಿಸಲಾಯಿತು.

Also Read  ಕಾರ್ಕಳ: ದ್ವಿಚಕ್ರ ವಾಹನ -ಟಿಪ್ಪರ್ ನಡುವೆ ಅಪಘಾತ ➤ ಓರ್ವ ಮಹಿಳೆ ಮೃತ್ಯು

 

error: Content is protected !!
Scroll to Top