ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಹಾಸನ . 25: ಕಾರ್ಜುವಳ್ಳಿ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್​ ನೋಟ್​ ಬರೆದಿಟ್ಟಿದ್ದಾರೆ.

ಬಾಳೆ ಹೊನ್ನೂರಿನ ರಂಭಾಪುರಿ ಶಾಖಾಮಠವಾದ ಆಲೂರು ತಾಲೂಕಿನ ಕಾರ್ಜುವಳ್ಳಿಯ ಮಠದ ಪೀಠದ ಜವಾಬ್ದಾರಿಯನ್ನು 2006ರಲ್ಲಿ ಇವರು ವಹಿಸಿಕೊಂಡಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಲಾಕ್​ಡೌನ್​ ಆದಾಗಿನಿಂದ ಮಠಕ್ಕೆ ಭಕ್ತರು ಬರುತ್ತಿರಲಿಲ್ಲ. ಸ್ವಾಮೀಜಿ ಒಬ್ಬರೇ ಆಗಿದ್ದರು. ಒಂಟಿತನದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಮೂಲತಃ ಕಾರವಾರದ ಹಳಿಯಾಲ ಗ್ರಾಮದವರು. ಪೂರ್ವಾಶ್ರಮದ ಹೆಸರು ಸತೀಶ್​ ದೇವರು. ಬಳಿಕ ಸನ್ಯಾಸ ಸ್ವೀಕರಿಸಿ ಶಂಭುಲಿಂಗ ಸ್ವಾಮೀಜಿಯಾಗಿದ್ದರು. ಈ ಕೇಸ್ ಸಂಬಂಧ ಆಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ನೀವು ಕೆಲಸ ಹುಡುಕುತ್ತಿದ್ದೀರಾ... ಇಲ್ಲಿವೆ ಹಲವು ಉದ್ಯೋಗಗಳು

 

error: Content is protected !!
Scroll to Top