ಬೆಳ್ತಂಗಡಿ: ಮೆಸ್ಕಾಂ ನಿವೃತ್ತ ಅಧೀಕ್ಷಕ ನಾರಾಯಣ ಪೂಜಾರಿ ನಿಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ . 25: ಮಂಗಳೂರಿನ ಅತ್ತಾವರದಲ್ಲಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪುತ್ತೂರು ಸರ್ವೆ ಗ್ರಾಮದ ಸರ್ವೆದೋಳ ನಿವಾಸಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ನಾರಾಯಣ ಪೂಜಾರಿ(61) ಎಂದು ಗುರುತಿಸಲಾಗಿದೆ.

 

Xl

 

ಕಳೆದ ನಾಲ್ಕು ವರ್ಷಗಳ ಹಿಂದೆ ಬೆಳ್ತಂಗಡಿ ಮೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರಾಗಿ ಕಾರ್ಯನಿರ್ವಹಿಸಿದ್ದು, ನಂತರ ಪುತ್ತೂರಿಗೆ ವರ್ಗಾವಣೆಗೊಂಡಿದ್ದರು. ಎರಡು ವರ್ಷಗಳ ನಂತರ ಅವರು ಅಧೀಕ್ಷಕ ಇಂಜಿನಿಯರ್ ಆಗಿ ಮಂಗಳೂರಿನ ಅತ್ತಾವರಕ್ಕೆ ವರ್ಗಾವಣೆಗೊಂಡಿದ್ದು, ಇವರು ಏ.30 ಕ್ಕೆ ಸೇವೆಯಿಂದ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ ಆಶಾಕಿರಣ, ಪುತ್ರಿ ನಿಹಾರಿಕಾ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

Also Read  Безопасно ли играть в азартном клубе Вавада?

 

Xl

error: Content is protected !!