ಕಡಬ ತಾ. ಸಮಸ್ತ ಸುನ್ನಿ ಮಹಲ್ ಪೇಡರೇಷನ್ ಜಮಾಅತ್ ಪ್ರತಿನಿಧಿ ಸಂಗಮ ಮತ್ತು ಸಮಸ್ತ ಆಗಲಿದ ನೇತಾರರ ಅನುಸ್ಮರಣೆ

(ನ್ಯೂಸ್ ಕಡಬ) newskadaba.com ಕಡಬ . 25: ಕಡಬ ತಾಲೂಕು ಸಮಸ್ತ ಸುನ್ನಿ ಮಹಲ್ ಪೇಡರೇಷನ್ (ಎಸ್.ಎಂ.ಎಫ್) ವತಿಯಿಂದ ಕಡಬ ತಾಲೂಕು ವ್ಯಾಪ್ತಿಯ ಜುಮ್ಮಾ ಮಸೀದಿಯ ಆಡಳಿತ ಸಮಿತಿಯ ಜಮಾಅತ್ ಪ್ರತಿನಿಧಿಗಳ ಸಂಗಮ ಮತ್ತು ಶೈಖುನಾ ಶಂಸುಲ್ ಉಲಮಾ ಅಗಲಿದ ಸಮಸ್ತ ನೇತಾರರ ಅನುಸ್ಮರಣ ಸಂಗಮವು ನ.24 ರಂದು ಕಡಬ ಮುಈನುಲ್ ಇಸ್ಲಾಂ ಮದರಸದಲ್ಲಿ ನಡೆಯಿತು. ಎಸ್.ಎಂ.ಎಫ್ ಕಡಬ ತಾಲೂಕು ಅಧ್ಯಕ್ಷರಾದ ಹಾಜಿ ಎಸ್. ಅಬ್ದುಲ್ ಖಾದರ್ ಸುಂಕದಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ನೆಟ್ಟಣ ಖತೀಬರಾದ ಜಲೀಲ್ ಅರ್ಶದಿ ಉದ್ಘಾಟಿಸಿದರು. ಪಣೆಮಜಲು ಖತೀಬರಾದ ಅಬ್ಬಾಸ್ ಮದನಿ ದುವಾ ನೆರವೇರಿಸಿದರು ಸುಂಕದಕಟ್ಟೆ ಖತೀಬರಾದ ಮುರ್ಷಿದ್ ಫೈಝಿ ಅನುಸ್ಮರಣಾ ಪ್ರಭಾಷಣ ನಡೆಸಿದರು.

ಈ ಸಭೆಯಲ್ಲಿ ಕಡಬ ತಾಲೂಕು ವ್ಯಾಪ್ತಿಯ 17 ಜಮಾಅತಿನ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ವ್ಯಾಪ್ತಿಯ ಈ ಜಮಾಅತ್‌ಗಳನ್ನು ಮಾದರಿ ಜಮಾಅತ್‌ಗಳಾಗಿ ರೂಪಿಕರಿಸುವರೇ ಕೆಲವೊಂದು ತೀರ್ಮಾಣಗಳನ್ನು ತೆಗೆದುಕೊಳ್ಳಲಾಯಿತು. ವೇದಿಕೆಯಲ್ಲಿ ಕಡಬ ಆರ್.ಟಿ.ಜೆ.ಎಂ. ಅಧ್ಯಕ್ಷ ಹಾಜಿ ಕೆ. ಅಬ್ದುಲ್ ಖಾದರ್, ಪ್ರಧಾನ ಕಾರ್ಯದರ್ಶಿ ಹಾಜಿ ಕೆ.ಎಸ್ ಅಬ್ದುಲ್ ಹಮೀದ್, ಹಾಜಿ ಕೆ.ಪಿ.ಎಂ. ಶರೀಫ್ ಫೈಝಿ, ಕಡಬ ಎಂ. ಐ ಮದರಸ ಸದರ್ ಉಸ್ತಾರ್ ಟಿ.ಹೆಚ್. ಶರೀಫ್ ದಾರಿಮಿ, ಎಸ್.ಎಂ.ಎಫ್ ಉಪಾಧ್ಯಕ್ಷ ಹಾಜಿ ರಫೀಕ್ ಗಂಡಿಬಾಗಿಲು, ಅಬ್ದುಲ್ ರಜಾಕ್ ಹೆಂತಾರ್, ಮತ್ತು ಕುದ್ಲೂರು, ಅತೂರು, ನೆಕ್ಕರೆ ಕುಂತೂರು, ಕಳಾರ, ಕಡಬ, ಪನ್ಯ, ಚಾಪಳ್ಳ, ಪಣೆಮಜಲು, ಪರಣೆ , ಸುಂಕದಕಟ್ಟೆ, ನೆಟ್ಟಣ, ಪೊಸೊಳಿಗೆ, ಗಂಡಿಬಾಗಿಲು, ಕೋಲ್ಪೆ, ಕುಂಡಾಜೆ ಜಮಾಅತಿನ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಎಂ.ಎಫ್. ಪ್ರ. ಕಾರ್ಯದರ್ಶಿ ಅಶ್ರಫ್ ಶೇಡಿಗುಂಡಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಎಸ್.ಎಂ.ಎಫ್. ಸಂ. ಕಾರ್ಯದರ್ಶಿ ಫಲ್‌ಲುದ್ದೀನ್ ಅತೂರು ವಂದಿಸಿದರು.

Also Read  ಅಕ್ರಮ ಡಿನೋಟಿಫೈ ಆರೋಪ: ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ► ಆರೋಪ ಸುಳ್ಳಾದರೆ ವಿಧಾನಸೌಧದ ಎದುರು ನೇಣು ಹಾಕುತ್ತೇನೆ: ಪುಟ್ಟಸ್ವಾಮಿ

 

error: Content is protected !!
Scroll to Top