ಪತಿಯ ಆತ್ಮಹತ್ಯೆಗೆ ಪ್ರಚೋದನೆ ➤ ಐವರ ವಿರುದ್ಧ ದೂರು ದಾಖಲಿಸಿದ ಪತ್ನಿ

(ನ್ಯೂಸ್ ಕಡಬ) newskadaba.com ಕುಂದಾಪುರ ನ. 25: ಸಾಲ ಕೇಳಲು ಹೋದ ಪತಿಗೆ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರಿಪಿಸಿದ ಆರೋಪದಲ್ಲಿ ಐವರ ವಿರುದ್ಧ ಮೈಸೂರು ವಿಜಯ ನಗರದ ಪಲ್ಲವಿ ಪಿ.(38) ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

 

ವೀರಭದ್ರೇಶ್ವರ ಸ್ಟೋನ್ ಕ್ರಷರ್ ಮಾಲಕಿ ಪ್ರೇಮ, ಅವರ ಗಂಡ ಕರೀಗೌಡ, ಪೆಟ್ರೋಲ್ ಬಂಕ್ ಮಾಲಕ ಜಿತೇಂದ್ರ ಗೌಡ, ಅವರ ಬಂಧು ಗಳಾದ ಅಶೋಕ್ ಎನ್.ಟಿ, ರಾಜೇಶ್ ಎನ್.ಟಿ ಎಂಬವರು ತನಗೆ ಬರಬೇಕಾದ ಸಾಲ ಕೇಳಲು ಹೋದ ಪಲ್ಲವಿ ಪತಿ ಮಧು ಎಂ.ಪಿ. ಅವರಿಗೆ ಅವಮಾನಿಸಿ ಹಾಗೂ ಬೆದರಿಕೆ ಹಾಕಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿದ್ದರು ಎಂದು ದೂರ ದಾಖಲಿಸಿದ್ದಾರೆ .ಮಧುರವರು ನಾಗಮಂಗಲ ವಾಸಿ ಕರೀಗೌಡ, ಅವರ ಪತ್ನಿ ಪ್ರೇಮ ಇವರುಗಳು ಕ್ರಷರ್ ಹಾಗೂ ಇತರ ವಾಹನಗಳಿಗೆ ಡೀಸೆಲ್ ಮತ್ತು ಆಯಿಲ್ ಸಾಲವಾಗಿ ಪಡೆದುಕೊಂಡು ಆಗಾಗ್ಗೆ ಹಣ ಪಾವತಿಸುತ್ತಿದ್ದು ತುಂಬಾ ಹಣ ಬಾಕಿ ಉಳಿಸಿಕೊಂಡಿದ್ದರು. ಈ ವಿಚಾರದಲ್ಲಿ ಮಧುರವರು ಮೈಸೂರಿಗೆ ಬಂದಾಗ ಸಾಲ ವಾಪಾಸ್ ಕೇಳಿದ್ದಾಗ ಅವಮಾನಿಸಿ ಹಿಂಸಿಸಿದ್ದರು ಎನ್ನಲಾಗಿದೆ.ಇದೇ ಚಿಂತೆಯಲ್ಲಿ ಮಧು ಮಾನಸಿಕವಾಗಿ ನೊಂದು ಅ.30ರಂದು ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.ಹಾಗೂ ಮಧುವವರು ಸಾಲದ ಬಗ್ಗೆ ಹಾಗೂ ತನ್ನ ಸಾವಿಗೆ ಕಾರಣದ ಬಗ್ಗೆ ಬರೆದಿರುವ ವಿವರಗಳಿರುವ ಪುಸ್ತಕ ದೊರೆತಿದೆ ಎಂದು ಪಲ್ಲವಿ ದೂರಿನಲ್ಲಿ ತಿಳಿಸಿದ್ದಾರೆ.

Also Read  ಡಿಜಿಟಲ್ ಮಾರ್ಕೆಟಿಂಗ್ ವಂಚನೆ        ➤18.43 ಲಕ್ಷ ರೂ. ಹಣ ಕಳೆದುಕೊಂಡ ವ್ಯಕ್ತಿ

 

 

 

error: Content is protected !!
Scroll to Top