ವೇಣೂರು: ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವೇಣೂರು . 25: ಬಜಿರೆ ಬೆಳ್ಳಿಬೆಟ್ಟು ನಿವಾಸಿಯೋರ್ವರು ಅನಾರೋಗ್ಯದಿಂದ ಬಳಲುತ್ತಿದ್ದು, ಇವರು ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ದಿನ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ರಾಜೇಶ್(27) ಎಂದು ಗುರುತಿಸಲಾಗಿದೆ.

 

Xl

 

ಇತ್ತೀಚಿನಿಂದ ಎರಡೂ ಕಾಲು ಬಲಹೀನವಾಗಿ ನಡೆಯಲು ಕಷ್ಟವಾಗಿತ್ತು. ಅದಲ್ಲದೇ ಇವರು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಕಳೆದೆರಡು ತಿಂಗಳಿನಿಂದ ತಲೆಯ ಎಡ ಭಾಗದಲ್ಲಿ ಗುಳ್ಳೆಯೊಂದು ಎದ್ದಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಮನೆಮಂದಿ ಮಲಗಿರುವ ವೇಳೆ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯವರು ಎದ್ದು ನೋಡಿದಾಗ ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅನಾರೋಗ್ಯದಿಂದ ಬೇಸತ್ತು ರಾಜೇಶ್ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಇನ್ಸ್ಟಾಗ್ರಾಮ್ ಬಳಕೆದಾರರೇ ಎಚ್ಚರ.! ➤ ಭಾರತದಲ್ಲಿ ಇನ್ಸ್ಟಾಗ್ರಾಮ್ ಬ್ಯಾನ್

 

error: Content is protected !!
Scroll to Top