ನಾವೂರು: ಅಂಗಡಿ ಮಾಲಕರಿಗೆ ಹಲ್ಲೆ ➤ ರೂ 1.50 ಲಕ್ಷ ನಗದು ದೋಚಿ ಪರಾರಿ

(ನ್ಯೂಸ್ ಕಡಬ) newskadaba.com ನಾವೂರು . 25: ಕಳೆದ ದಿನ ಕೈಕಂಬ ಬಸ್ ತಂಗುದಾಣದಲ್ಲಿ ವ್ಯಾಪಾರ ನಡೆಸುತ್ತಿದ್ದ ಕೃಷ್ಣಪ್ಪ ಗೌಡ ದಡ್ಡು ಇವರು ಅಂಗಡಿ ಬಾಗಿಲು ಹಾಕಿ ಹೊರಡುವ ಸಂದರ್ಭದಲ್ಲಿ ಹಲ್ಲೆಗೈದು, ವ್ಯಾಪಾರವಾದ ಸುಮಾರು 1.50 ಲಕ್ಷ ರೂ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ.

 

ಕೃಷ್ಣಪ್ಪ ರವರು 10 ಗಂಟೆಯ ಸುಮಾರಿಗೆ ಅಂಗಡಿಗೆ ಬೀಗ ಹಾಕಿ ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಡುವ ಸಂದರ್ಭದಲ್ಲಿ 2 ಮಂದಿ ದರೋಡೆಕೋರರು ಕೃಷ್ಣಪ್ಪ ರವರ ಕಣ್ಣಿಗೆ ಖಾರ ಪುಡಿ ಎರಚಿ, ಕೈ ಕಾಲು ತಲೆಗೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಇನ್ನು ಕೈಯಲ್ಲಿದ್ದ ಬ್ಯಾಂಕಿನಿಂದ ತಗೊಂಡು ಬಂದಿದ್ದ ಸಾಲದ ಹಣ ಮತ್ತು ಆದಿನ ವ್ಯಾಪಾರದ ನಗದು ಸೇರಿ ರೂ 1.50 ಲಕ್ಷ ಹಾಗೂ ರೆಕಾರ್ಡ್ ಅಂಗಡಿ ಕೀ ಇದ್ದ ಬ್ಯಾಗನ್ನು ದೋಚಿ ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಕೃಷ್ಣಪ್ಪರವರನ್ನು ಸ್ಥಳೀಯರು ಉಜಿರೆ ಬೆನಕ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ಕಡೇಶ್ವಾಲ್ಯ ಬೆಂಕಿ ಅವಘಡಕ್ಕೆ ತುತ್ತಾಗಿದ್ದ ಮಹಿಳೆ ಮೃತ್ಯು

 

Xl

error: Content is protected !!
Scroll to Top