ಉಡುಪಿ: ಆನ್‍ಲೈನ್ ನಲ್ಲಿ ಆರ್ಡರ್ ಮಾಡಿದ್ದು “ಕುಕ್ಕರ್” ಮನೆಗೆ ಬಂದಿದ್ದು “ಇಟ್ಟಿಗೆ”

(ನ್ಯೂಸ್ ಕಡಬ) newskadaba.com ಉಡುಪಿ, ನ. 25:  ಆನ್ಲೈನ್ ಕಂಪನಿಗಳನ್ನು ಹೇಗೆ ನಂಬುವುದು ಎಂದು ಜನ ಇದೀಗ ಮತ್ತೆ ಭೀತಿಗೊಳಗಾಗಿದ್ದಾರೆ.ಜನರು ಮನೆಯಲ್ಲಿ ಕೂತು ಮೊಬೈಲ್ ಮೂಲಕ ಆನ್‌ಲೈನ್‌ ಆರ್ಡರ್ ಮಾಡಿದರೆ ಮನೆಗೆ ವಸ್ತುಗಳು ಬಂದುಬಿಡುತ್ತದೆ.ಮನೆ ಹತ್ತಿರದಲ್ಲಿರುವ ಅಂಗಡಿಗಳಿಗೆ ತೆರಳದ ಆನ್ ಲೈನ್ ಮೂಲಕ ವ್ಯವಹಾರ ಮಾಡಿಕೊಂಡು ಜೀವನ ನಡೆಸುತ್ತಾರೆ.

 

ಈ ಆನ್ಲೈನ್ ಆರ್ಡರ್ ಮೂಲಕ ಕೂಡ ಮೋಸ ಹೋಗುತ್ತಾರೆ ಅನ್ನೋದೆ ನಿದರ್ಶವಾಗಿದೆ. ಮಣಿಪಾಲದ ಮಹಿಳೆಯೊಬ್ಬರು ಆನ್‍ಲೈನ್ ನಲ್ಲಿ ಕುಕ್ಕರ್ ಆರ್ಡರ್ ಮಾಡಿದ್ದಾರೆ. ಆದರೆ ಅವರಿಗೆ ಕುಕ್ಕರ್ ಬದಲು ಇಟ್ಟಿಗೆ ಬಂದಿರುವುದು ವಿಪರ್ಯಾಸ.ಮಣಿಪಾಲದ ನಿವಾಸಿ ಸುಲೋಚನ ಎನ್ನೋರು ಫ್ಲಿಪ್ಕಾರ್ಟ್ ಮೂಲಕ ಕುಕ್ಕರನ್ನು ಆರ್ಡರ್ ಮಾಡಿದರು, ಆರ್ಡರ್ ಮಾಡಿದ ಪ್ರಕಾರ ಕುಕ್ಕರ್ ಬಂದಿದೆ ಅದನ್ನು ಮೂರು ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡುತ್ತಾರೆ, ಆದರೆ ತೆಗೆದು ನೋಡುವಾಗ ಅಲ್ಲಿ ಕುಕ್ಕರ್ ಇಲ್ಲ ಮನೆ ಕಟ್ಟುವ ಇಟ್ಟಿಗೆ ಇತ್ತು, ಇದರಿಂದ ಆಶ್ಚರ್ಯಗೊಂಡ ಸುಲೋಚನ ಫ್ಲಿಪ್ಕಾರ್ಡ್ ಕಂಪನಿಗೆ ಕಂಪ್ಲೇಂಟ್ ಮಾಡಿದ್ದಾರೆ, ಇವರಿಗೆ ಫ್ಲಿಪ್ಕಾರ್ಡ್ ಕಂಪನಿಯಿಂದ ಮೋಸ ಆಗಿದೆಯಾ ಅಥವಾ ಕೋರಿಯರ್ ಹುಡುಗರ ಕರಾಮತ್ತು ಮಾಡಿದ್ದಾರೆಯೇ ಎಂಬುದು ತಿಳಿದು ಬರಬೇಕಿದೆ.

Also Read  ಆ್ಯಂಕರ್ ಅನುಶ್ರೀ ವಿಚಾರಣೆ ನಡೆಸಿದ್ದ ಸಿಸಿಬಿ ಇನ್ಸ್‍ಪೆಕ್ಟರ್ ವರ್ಗಾವಣೆ

 

Xl

error: Content is protected !!
Scroll to Top