(ನ್ಯೂಸ್ ಕಡಬ) newskadaba.com ಮಂಗಳೂರು ನ. 25: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರ ಆರಾಧನಾ ಪುರುಷರಾದ ಕೋಟಿ ಚೆನ್ನಯ್ಯರ ಹೆಸರಿಡಬೇಕೆಂದು ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ ಇದೀಗ ಬೇರೆ ರೀತಿಯಲ್ಲಿಯೇ ಪ್ರತಿಭಟನೆ ನಡೆಸುತ್ತಿದೆ. ಯುವ ಕಾಂಗ್ರೆಸ್ ಇದೀಗ ‘ಕೋಟಿ ಚೆನ್ನಯ್ಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಸ್ವಾಗತ’ ಅನ್ನೋ ಹೋರ್ಡಿಂಗ್ಸ್ ಗಳನ್ನ ಅಳವಡಿಸಿದ್ದು ಗಮನಸೆಳೆದಿದೆ.
ವಿಮಾನ ನಿಲ್ದಾಣದ ಪ್ರವೇಶ ದ್ವಾರ, ನಿರ್ಗಮನ ದ್ವಾರ ಹಾಗೂ ಪ್ರಮುಖ ರಸ್ತೆಯ ಬಳಿ ದೊಡ್ಡದಾದ ಮೂರು ಹೋರ್ಡಿಂಗ್ಸ್ ಗಳನ್ನ ಅಳವಡಿಸಿದೆ. ಕಳೆದ ವಾರವಷ್ಟೇ ಪಂಜಿನ ಮೆರವಣಿಗೆ ನಡೆಸುವ ಮೂಲಕ ತೀವ್ರ ಹೋರಾಟದ ಎಚ್ಚರಿಕೆಯನ್ನ ನೀಡಿತ್ತು.ಹೋರ್ಡಿಂಗ್ ಅಳವಡಿಕೆ ಬಗ್ಗೆ ಮಾಹಿತಿ ನೀಡಿರುವ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಕಾಂಗ್ರೆಸ್ ಈಗಾಗಲೇ ‘ಅದಾನಿ ಏರ್ ಪೋರ್ಟ್’ ಹೆಸರಲ್ಲಿ ಇರುವ ವಿಮಾನ ನಿಲ್ದಾಣವನ್ನ ‘ಕೋಟಿ ಚೆನ್ನಯ್ಯ ಏರ್ ಪೋರ್ಟ್’ ಎಂದು ನಿರ್ಧರಿಸಿ ಆಗಿದೆ. ಇದರ ಮುಂದುವರಿದ ಭಾಗವಾಗಿ ಹೋರ್ಡಿಂಗ್ ಗಳನ್ನ ಅಳವಡಿಸಲಾಗಿದೆ” ಎಂದಿದ್ದಾರೆ.