ನೇತ್ರಾವತಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕನ ಮೃತ ದೇಹ ಪತ್ತೆ..



 (ನ್ಯೂಸ್ ಕಡಬ) newskadaba.com ಮಂಗಳೂರು, ಅ.6. ಆಟೋ ಚಾಲಕರೊಬ್ಬರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಸಮೀಪದಲ್ಲಿ ಗುರುವಾರ ಸಂಜೆ ನಡೆದಿದೆ.





ಆತ್ಮಹತ್ಯೆ ಮಾಡಿಕೊಂಡ ಆಟೋ ಚಾಲಕ ಕೋಡಿಕಲ್ ಅಶೋಕ ನಗರದ ಮಹಮ್ಮದ್ ಬಶೀರ್ (35) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ತೊಕ್ಕೊಟು ಕಡೆಗೆ ಹೋಗುತ್ತಿದ್ದ ವೇಳೆ ಆಟೋ ನಿಲ್ಲಿಸಿ ನದಿಗೆ ಹಾರಿದ್ದಾರೆ. ಹಾರಿದ ಕೆಲವೇ ಕ್ಷಣದಲ್ಲಿ ಸಾರ್ವಜನಿಕರು ಜಮಾಯಿದ್ದು ಕೂಡಲೆ ಪೊಲೀಸರಿಗೆ ಸುದ್ಧಿ ಮುಟ್ಟಿದ್ದಾರೆ. ನದಿಗೆ ಬಿದ್ದು ನೀರಿನಲ್ಲಿ ವಿಲವಿಲ ಒದ್ದಾಡಿದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.






ಅಗ್ನಿಶಾಮಕ ದಳ, ಮುಳುಗುತಜ್ಞರ ಕಾರ್ಯಾಚರಣೆ ನಡೆಸಿದ ಬಳಿಕ ಇಂದು ಮೃತ ದೇಹ ಪತ್ತೆಯಾಗಿದೆ.

error: Content is protected !!
Scroll to Top