ಬೆಳ್ಳಾರೆ: ಬೆಳಕು ಕಾಣದ ಮನೆಗೆ ಸೋಲಾರ್ ಲೈಟ್ ಸಿಸ್ಟಮ್ ಕೊಡುಗೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ . 25: ಬೆಳ್ಳಾರೆ ವಲಯದ ಬೆಳ್ಳಾರೆ ಒಕ್ಕೂಟದ ಸ್ವಾಮಿ ಕೊರಗಜ್ಜ ಸಂಘದ ಸದಸ್ಯರಾದ ಶ್ರೀಮತಿ ಫಾತೀಮರವರು ಉಪ್ಪಂಗಳ ಎಂಬ ಗುಡ್ಡ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

 

 

ಇವರ ಮನೆಗೆ ವಿದ್ಯುತ್ ಸಂಪರ್ಕ ಇಲ್ಲ. ಇದನ್ನು ಮನಗಂಡು ಇವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೆಲ್ಕೋ ಸೋಲಾರ್ ಸಂಸ್ಥೆಯ ಸಹಯೋಗದೊಂದಿಗೆ ಸೋಲಾರ್ ಲೈಟ್ ಸಿಸ್ಟಮ್ ನ್ನು ಕೊಡುಗೆಯಾಗಿ ನೀಡಿ ಕಳೆದ ದಿನ ಅವರ ಮನೆಗೆ ಅಳವಡಿಸಲಾಗಿತ್ತು. ಶ್ರೀ ಕ್ಷೇತ್ರ ಧ.ಗ್ರಾ.ಯೋ. ಬೆಳ್ಳಾರೆ ವಲಯ ಮೇಲ್ವಿಚಾರಕ ಮುರಳಿಧರ, ಸೆಲ್ಕೋ ಸೋಲಾರ್ ಸಂಸ್ಥೆಯ ಮ್ಯಾನೇಜರ್ ಜಗನ್ನಾಥ್, ಜನಪ್ರತಿನಿಧಿ ಶ್ರೀಮತಿ ಪವಿತ್ರಾ ರವರು ಉಪಸ್ಥಿತರಿದ್ದರು.

Also Read  ತೋಟಗಾರಿಕಾ ಇಲಾಖೆಯಿಂದ ಅಡಿಕೆ ಮತ್ತು ತೆಂಗಿನ ಕೀಟರೋಗ ನಿಯಂತ್ರಣಕ್ಕೆ ಸಹಾಯಧನ

 

Xl

error: Content is protected !!
Scroll to Top