ಪ್ರವಾಸಿಗರಿಗೆ ಜೆಲ್ ಫಿಶ್ ಕಾಟ ➤ ಸೈಂಟ್ ಮೇರೀಸ್ ದ್ವೀಪ ಅವ್ಯವಸ್ಥೆಗೆ ಆಕ್ರೋಶ

(ನ್ಯೂಸ್ ಕಡಬ) newskadaba.com ಉಡುಪಿ . 25:  ಉಡುಪಿಯ ಮಲ್ಪೆ ಸೈಂಟ್ ಮೇರೀಸ್ ದ್ವೀಪ ಅವ್ಯವಸ್ಥೆಗಳ ಆಗರವಾಗಿದ್ದು, ಪ್ರವಾಸಿಗರು ಎಚ್ಚರ ವಹಿಸಬೇಕಾಗಿದೆ ಎಂದು ಮುಲ್ಕಿ ಸಮೀಪದ ಶಿಮಂತೂರಿನ ಸಾಮಾಜಿಕ ಕಾರ್ಯಕರ್ತ ಸುಧೀರ್ ಶೆಟ್ಟಿ ಹೇಳಿದ್ದಾರೆ.

 

 

ಸೈಂಟ್ ಮೇರೀಸ್ ದ್ವೀಪದಲ್ಲಿ ಸ್ನಾನ ಮಾಡುವ ಪ್ರವಾಸಿಗರಿಗೆ ಜೆಲ್ ಫಿಶ್ ಕಚ್ಚುತ್ತಿದ್ದು, ತುಂಬಾ ನೋವು ಅನುಭವಿಸಬೇಕಾಗುತ್ತದೆ. ಕಳೆದ ದಿನದ ಹಿಂದೆ ಸುಧೀರ್ ಶೆಟ್ಟಿ ಶಿಮಂತೂರ್ ಕುಟುಂಬ ಮಲ್ಪೆ ಸೈಂಟ್‌ ಮೇರೀಸ್ ದ್ವೀಪಕ್ಕೆ ತೆರಳಿ ಸ್ನಾನಕ್ಕೆ ನೀರಿಗೆ ಇಳಿದಿದ್ದರು. ಅಲ್ಲಿ ಅವರ ಪತ್ನಿಗೆ ಜೆಲ್ ಫಿಶ್ ಕಚ್ಚಿದ್ದು ತುಂಬಾ ನೋವು ಅನುಭವಿದಸಿದ್ದಾರೆ. ನಂತರ ಆಸ್ಪತ್ರೆಗೆ ತೆರಳಿ ಚಿಕೆತ್ಸೆ ತೆಗೆದುಕೊಂಡಿದ್ದಾರೆ. ಏನಾದರೂ ಅವಘಡ ಸಂಭವಿಸಿದರೆ ದ್ವೀಪದಿಂದ ಬೇಗನೆ ಹಿಂದೆ ಬರಲೂ ಆಗುವುದಿಲ್ಲ. ಅಲ್ಲಿ ಸಮಯ ಸಮಯಕ್ಕೆ ದೋಣಿಯ ವ್ಯವಸ್ಥೆ ಇರುವುದಿಲ್ಲ. ಮಕ್ಕಳನ್ನು ಕರೆದುಕೊಂಡು ಹೋಗುವಾಗ ತುಂಬಾ ಜಾಗ್ರತೆ ವಹಿಸಿ ಎಂದು ಮನವಿ ಮಾಡಿದ್ದಾರೆ.

Also Read  ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕಿರುಕುಳ ಪ್ರಕರಣ ➤ಶಿಕ್ಷಕ ಅಮಾನತು

 

 

error: Content is protected !!
Scroll to Top