ಫೀಸ್ ಕಟ್ಟದ ಮಕ್ಕಳನ್ನು ಫೇಲ್ ಮಾಡುವಂತಿಲ್ಲ ➤ ಶಿಕ್ಷಣ ಸಚಿವ ಸುರೇಶ್ ಕುಮಾರ್ ಖಡಕ್ ಸೂಚನೆ

(ನ್ಯೂಸ್ ಕಡಬ) newskadaba.com ಬೆಂಗಳೂರು . 25: ಈ ವರ್ಷ ಶಾಲಾ ಶುಲ್ಕ ಕಟ್ಟದ ಮಕ್ಕಳನ್ನು ಮುಂದಿನ ವರ್ಷಕ್ಕೆ ಪಾಸ್ ಮಾಡಲ್ಲ ಎಂದು ಖಾಸಗಿ ಶಾಲೆಗಳು ಯಾವುದೇ ಕಾರಣಕ್ಕೂ ಹೇಳುವಂತಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.

 

ಬಳಿಕ ಖಾಸಗಿ ಶಾಲೆಗಳ ಶುಲ್ಕ ವಸೂಲಿ ವಿಚಾರದ ಬಗ್ಗೆಯೂ ಮಾತನಾಡಿ, ಸೆಕೆಂಡ್ ಟರ್ಮ್ ಫೀಸ್ ಕಲೆಕ್ಟ್ ಮಾಡಲು ಖಾಸಗಿ ಶಾಲೆಗಳು ಅನುಮತಿ ಕೇಳಿವೆ. ಸರ್ಕಾರ ಇನ್ನೂ ಅನುಮತಿ ಕೊಟ್ಟಿಲ್ಲ. ಫೀಸ್ ಕಲೆಕ್ಟ್ ಮಾಡಿದ ತಕ್ಷಣ ಮೊದಲ ಆಧ್ಯತೆ ಶಿಕ್ಷಕರ ವೇತನ ಕೊಡಲು. ಸ್ಕೂಲ್ ಫೀಸ್ ಕಡಿಮೆ ಮಾಡುವ ವಿಚಾರದ ಅರ್ಜಿ ಕೋರ್ಟ್‍ನಲ್ಲಿದೆ. ಈಗ ಅದರ ಬಗ್ಗೆ ಏನೂ ಹೇಳೋಕೆ ಆಗಲ್ಲ ಎಂದ ಸಚಿವರು, ಶುಲ್ಕ ಕಟ್ಟಿಲ್ಲ ಮಕ್ಕಳನ್ನು ಮುಂದಿನ ವರ್ಷಕ್ಕೆ ಪಾಸ್ ಮಾಡಲ್ಲ ಎಂದು ಖಾಸಗಿ ಶಾಲೆಗಳು ಹೇಳುವಂತಿಲ್ಲ. ಸರ್ಕಾರ ಈ ಬಗ್ಗೆ ಶೀಘ್ರವೇ ಒಂದು ನಿರ್ಧಾರ ಪ್ರಕಟಿಸಲಿದೆ ಎಂದು ಸ್ಪಷ್ಟಪಡಿಸಿದರು.ಇನ್ನು ಶಾಲೆ ಕಾಲೇಜುಗಳು ಡಿಸೆಂಬರ್ ನಂತರವಷ್ಟೆ ತೆರೆದುಕೊಳ್ಳಲಿದೆ.

Also Read  ಉತ್ತರದಲ್ಲಿ ಭಾರತದಲ್ಲಿ ದಟ್ಟ ಮಂಜು: ದುರಂತಗಳಲ್ಲಿ 11 ಮಂದಿ ಮೃತ್ಯು…!

 

 

error: Content is protected !!
Scroll to Top