ಆಲಂಕಾರು: ಬಿಜೆಪಿ ಸಮರ್ಥನಾ ಸಮಾವೇಶ ► ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಮುಂದಿನ ಗುರಿ- ಡಿ.ಎಸ್.ವೀರಯ್ಯ

(ನ್ಯೂಸ್ ಕಡಬ) newskadaba.com ಕಡಬ,ಅ.6. ಭಾರತೀಯ ಜನತಾ ಪಾರ್ಟಿಯ ಬೆಳಂದೂರು, ಹಾಗೂ ನೆಲ್ಯಾಡಿ ಶಕ್ತಿ ಕೇಂದ್ರಗಳ ಎಸ್ .ಸಿ ಮೋರ್ಚಾ ವತಿಯಿಂದ ಸಮರ್ಥನಾ ಸಮಾವೇಶ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರೈತ ಭವನ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಸಮರ್ಥನಾ ಸಮಾವೇಶವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಡಾ. ಬಿ ಆರ್ ಅಂಬೇಡ್ಕರ್ ಅವರ ಜೀವನದ ತತ್ವ ಆದರ್ಶಗಳನ್ನು ಗೌರವಿಸಿ ಬಿಜೆಪಿ ಆಡಳಿತವಧಿಯಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಂಬೇಡ್ಕರ್ ಹೆಸರನ್ನು ವೋಟಿಗಾಗಿ ಬಳಸಿಕೊಂಡು ಬಳಿಕ ಅವರ ವಿಚಾರಧಾರೆಗೆ ಸ್ಪಂದಸಿದ ಕಾಂಗ್ರಸ್ಸಿಗರ ದಲಿತ ವಿರೋದಿ ನೀತಿಯನ್ನು ಜನತೆಗೆ ತಿಳಿಸಬೇಕಾಗಿದೆ ಎಂದು ಹೇಳಿದರು ನಮ್ಮನ್ನಾಳಿದ ಕಾಂಗ್ರ್ರೆಸ್ಸಿಗರು ನೆಹರು ಕಾಲದಿಂದಲೂ ಎಸ್ಸಿಗಳ ಭಾವನೆ, ಹಕ್ಕುಗಳನ್ನು ಕಸಿಯುತ್ತಲೇ ಬಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತವಾಧಿಯಲ್ಲಿ ಮತ್ತು ಪ್ರಸಕ್ತ ನರೇಂದ್ರ ಮೋದಿ ಸರಕಾರ ಹಿಂದುಳಿದವರ ಕಲ್ಯಾಣಕ್ಕಾಗಿ ಅಂಬೇಡ್ಕರ ಅವರ ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಉತ್ತಮ ಯೋಜನೆಗಳನ್ನು ಹಮ್ಮಿಕೊಂಡು ಹಿಂದುಳಿದವರು ಮುಖ್ಯ ವಾಹಿನಿಗೆ ಬರುವಂತಾಗಿದೆ. ರಾಮನಾಥ್ ಕೋವಿಂದ್ ಅವರಂತಹ ದಲಿತ ವ್ಯಕ್ತಿಯನ್ನು ದೇಶದ ಪ್ರಥಮ ಪ್ರಜೆಯ್ನಾಗಿಸಿ ದಲಿತ ಹಿಂದುಳಿದವರ ವ್ಯಕ್ತಿತ್ವಕ್ಕೆ ಬೆಲೆ ಕೊಟ್ಟಂತಾಗಿದೆ. ಅಲ್ಲದೆ ಅಂಬೇಡ್ಕರ್ ಅವರ ಜನ್ಮ ಸ್ಥಳವನ್ನು ಕೇಂದ್ರ ಸರಕಾರ ಹಲವಾರು ಕೋಟಿ ರೂ ವೆಚ್ಚದಲ್ಲಿ ಐತಿಹಾಸಿಕ ಕ್ಷೇತ್ರವ್ನಾಗಿಸಿರುವುದು, ಅಂಬೇಡ್ಕರ್ ಹೆಸರಿನಲ್ಲಿ ಸಂಶೋಧನ ಕೇಂದ್ರ ನಿರ್ಮಿಸಿರುವುದು ಮೊದಲಾದ ಕಲ್ಯಾಣ ಯೋಜನೆಗಳ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಕೊಡುತ್ತಿದೆ. ಬಿಜೆಪಿ ಸರಕಾರವಾಧಿಯ ಜನಪರ ಯೋಜನೆಗಳ ಕೈಪಿಡಿ ಮಾಡಲಾಗಿದ್ದು ಮನೆ ಮನೆ ತಲುಪಿಸಿ ಕರ್ನಾಟಕದಲ್ಲಿ ಬಿಜೆಪಿಯ ಮಿಷನ್ 150+ ನ್ನು ಗುರಿತಲುಪಬೇಕು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್ ಅಂಗಾರ ಮಾತನಾಡಿ, ಶುದ್ದ ಮನಸ್ಸಿನಿಂದ ಕಾರ್ಯ ಕ್ಷೇತ್ರದಲ್ಲಿ ದೃಡತೆ ಆತ್ಮವಿಶ್ವಾಸ ಬೇಕು ಎನ್ನುವುದು ಅಂಬೇಡ್ಕರ್ ಅವರ ನಿಲುವು. ಅಂಬೇಡ್ಕರ್ ಅವರ ವಾದಕ್ಕೆ ಬೆಲೆ ಕೊಟ್ಟದು ಬಿಜೆಪಿ ಅವಧಿಯಲ್ಲಿ ಮಾತ್ರ.  ಓಟು ರಾಜಕಾರಣ ಮಾಡುವ ಕಾಂಗ್ರೆಸ್ಸಿಗರು ಸ್ವಹಿತ ಬಿಟ್ಟರೆ ಅಭಿವೃದ್ದಿ ಚಿಂತಿಸುವ ಜಾಯಮಾನದವರಲ್ಲ. ಬಿಜೆಪಿಯಲ್ಲಿ ಸಂಘಟನ ಶಕ್ತಿ ಇದೆ. ಹಾಗಾಗಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣವಾಗುತ್ತದೆ ಎಂದರು.

ಬಿಜೆಪಿ ಹಿರಿಯ ಕಾರ್ಯಕರ್ತ , ಎ.ಪಿಎಂಸಿ ಮಾಜಿ ನಿರ್ದೆಶಕ ಸೋಮನಾಥ ಕನ್ಯಾಮಂಗಲ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮಾತನಾಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಭಾಗೀರಥಿ ಮುರುಳ್ಯ, ಎಸ್.ಸಿ ಮೋರ್ಚಾ ದ.ಕ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ದ.ಕ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಪುತ್ತೂರು ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಎಸ್ಸಿ ಮೋರ್ಚಾ ಕೊಡುಗು ಜಿಲ್ಲಾಧ್ಯಕ್ಷ ಸತೀಶ್ , ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ನಾಗರಾಜ ಮಲ್ಲಡಿ, ಮುಖಂಡರಾದ ವಿನಯ ನೇತ್ರ, ಕೇಶವ ಮಾಸ್ತರ್, ಕುಂಞ ಕಮ್ಮತ್ತಿಲ, ಲಲಿತಾ ಈಶ್ವರ, ಶೀನಪ್ಪ, ಕೊರಗಪ್ಪ, ಕೊರಗಪ್ಪ ಪಂಜೋಡಿ, ರಾಜೇಶ್ವರಿ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದ ಹಲವಾರು ಮಂದಿ ಬಿಜೆಪಿ ಸೇರ್ಪಡೆಗೊಂಡರು. ಪಕ್ಷದ ಧ್ವಜ ಶಾಲು ನೀಡಿ ಅವರುಗಳನ್ನು ಸ್ವಾಗತಿಸಲಾಯಿತು. ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರಸ್ತಾವಿಸಿದರು. ಬಾಳಪ್ಪ ಕಳಂಜ ಸ್ವಾಗತಿಸಿದರು. ಶೀನಪ್ಪ ವಂದಿಸಿದರು. ಬಿಜೆಪಿ ಮುಖಂಡರಾದ ಲಕ್ಷ್ಮೀನಾರಾಯಣ ರಾವ್ ಆತೂರು, ರಾಕೇಶ್ ರೈ ಕೆಡೆಂಜಿ ನಿರೂಪಿಸಿದರು. ಬಳಿಕ ಗುಂಪುಗಳಲ್ಲಿ ಸಮಾಲೋಚನೆ , ಸಮಾರೋಪ ಸಮಾರಂಭ ನಡೆಯಿತು.

error: Content is protected !!

Join the Group

Join WhatsApp Group