ಐಎಂಎ ಹಗರಣ ➤ ಐಪಿಎಸ್​ ಅಧಿಕಾರಿ ಅಜಯ್​ ಹಿಲೋರಿಗೆ ಸಿಬಿಐ ನೋಟೀಸ್

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 24: ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಹಿರಿಯ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದೆ. ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಜತೆ ಡೀಲ್ ನಡೆಸಿದ್ದರೆನ್ನುವ ಆರೋಪ ಹಿಲೋರಿ ಅವರ ಮೇಲಿದ್ದು ಈ ಬಗ್ಗೆ ವಿಚಾರಣೆ ನಡೆಸಲು ಸಿಬಿಐ ಹಿಲೋರಿಗೆ ನೋಟೀಸ್ ಕೊಟ್ಟಿದೆ.

ಪ್ರಕರಣಕ್ಕೆ ಸಂಬಂಧಿಸಿ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ (ಹೆಚ್ಚುವರಿ ಪೊಲೀಸ್​ ಆಯುಕ್ತ ,ಆಡಳಿತ), ಬೆಂಗಳೂರು ನಗರ ಪೊಲೀಸ್​ ಕಮೀಷನರೇಟ್​) ಮತ್ತು ಅಜಯ್ ಹಿಲೋರಿ ಅವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರ ಈ ಹಿಂದೆ ಅನುಮತಿ ನೀಡೀತ್ತು.

Also Read  ಕಡಬ: ಹೈಸ್ಕೂಲ್ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ➤‌ ಯುವಕರಿಬ್ಬರು ಪೊಲೀಸ್ ವಶಕ್ಕೆ

error: Content is protected !!
Scroll to Top