ಉಡುಪಿ: ಕುಂದಗನ್ನಡ ಸಾಹಿತ್ಯಲೋಕ ಬ್ರಹ್ಮ ಅಶೋಕ್ ನೀಲಾವರ ನಿಧನ

(ನ್ಯೂಸ್ ಕಡಬ) newskadaba.com ಉಡುಪಿ ನ. 24: ಕುಂದಗನ್ನಡ ಸಾಹಿತ್ಯಲೋಕ ಬ್ರಹ್ಮ ಅಶೋಕ್ ನೀಲಾವರ ನಿಧನರಾಗಿದ್ದಾರೆ. ಅರೆಭಾಷೆ ಕುಂದಾಪುರದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪಣ್ಕ್ ಮಕ್ಕಳ್ ಆಲ್ಬಮ್ ಸಾಂಗ್ ಮೂಲಕ ಹೊಸ ಅಧ್ಯಾಯ ಬರೆದಿದ್ದರು. ಸಂಗೀತ ನಿರ್ದೇಶಕ ರವಿ ಬಸ್ರೂರ್ ಗರಡಿಯಲ್ಲಿ ಹಲವು ಕುಂದಗನ್ನಡದ ಸಾಹಿತ್ಯ ಉಣಬಡಿಸಿದ ಒಬ್ಬ ಅದ್ಭುತ ಬರಹಗಾರರಾಗಿದ್ದರು.

 

 

ನಂತರ ಕನ್ನಡದ ಕಮರ್ಷಿಯಲ್ ಸಿನಿಮಾಗಳತ್ತ ಮುಖಮಾಡಿದ ಅಶೋಕ್ ನೀಲಾವರ, ನಿರ್ಮಾಪಕ ಪಿ. ಆರ್. ಅಮೀನ್ ನಿರ್ಮಾಣದ ಕತ್ತಲೆ ಕೋಣೆ ಕನ್ನಡ ಚಿತ್ರಕ್ಕೆ ಎರಡು ಹಾಡುಗಳನ್ನು ನೀಡಿ ಜನಮನ್ನಣೆ ಗಳಿಸಿದರು.ವೃತ್ತಿಯಲ್ಲಿ ಬಡಗಿಯಾಗಿದ್ದ ಅವರು, ಬೆಳಗಾವಿ ಜಿಲ್ಲೆಯ ಗೋಕಾಕ್ ಗೆ ಕೆಲಸಕ್ಕಾಗಿ ತೆರಳಿದರು. ತೀವ್ರವಾಗಿ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಹೃದಯಾಘಾತ ಆಗಿದೆ. ಉಡುಪಿ ಜಿಲ್ಲೆಯ ನೀಲಾವರದ ಅವರ ಮನೆಯಲ್ಲಿ ಇಂದು ವಿಶ್ವಕರ್ಮ ಸಂಪ್ರದಾಯದ ಮೂಲಕ ವಿಧಿವಿಧಾನ ನಡೆಯಲಿದೆ.

Also Read  ನಾಡಹಬ್ಬ ದಸರಾ ಮಹೋತ್ಸವದ ಯಶಸ್ವಿಗಾಗಿ ಹರಕೆ ➤ ಚಾಮುಂಡಿಯ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ ಡಿಸಿ ರೋಹಿಣಿ

 

error: Content is protected !!
Scroll to Top