ಎರಡೂ ಕಾಲಿಲ್ಲದ ಯುವತಿಗೆ “ಬಾಳ ದೀಪ” ವಾದ ಸಂ”ದೀಪ”

(ನ್ಯೂಸ್ ಕಡಬ) newskadaba.com ಉಡುಪಿ . 24: ಕಾಲುಗಳೆರಡೂ ಬಲಹೀನವಾದರೂ, ಈ ಯುವತಿಯ ಅದೃಷ್ಟಬಲ ಮಾತ್ರ ದೃಢವಾಗಿತ್ತು. ದುಬೈ ನಲ್ಲಿ ಉದ್ಯೋಗ ಮಾಡುತ್ತಿರುವ ಯುವಕ ತಾನೇ ಮುಂದೆ ಬಂದು ಈ ಹೆಣ್ಣು ಮಗಳ ಬಾಳಿಗೆ ಬೆಳಕಾಗಿದ್ದಾರೆ.

 

 

ಪೋಲಿಯೊಗೆ ತುತ್ತಾಗಿ ಎರಡೂ ಕಾಲುಗಳಲ್ಲಿ ಈಕೆ ಬಲ ಕಳೆದುಕೊಂಡಿದ್ದಾರೆ. ಪಿಯುಸಿ ವರೆಗೆ ಓದಿ, ತಂದೆ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುನೀತಾ, ತನ್ನ ಕಾಲಿನಂತೆ ಬದುಕು ಕೂಡ ನಿರಾಧಾರವಾಗುತ್ತೆ ಎಂದು ಖಿನ್ನತೆಗೆ ಜಾರಿದ್ದಳು. ಈ ಸಂದರ್ಭದಲ್ಲಿ ಅದೃಷ್ಟದ ಬಾಗಿಲು ತೆರೆದಿದೆ. ದುಬೈ ನ ಆಯಿಲ್ ಕಂಪೆನಿಯಲ್ಲಿ ಉದ್ಯೋಗ ಮಾಡುವ ಸಂದೀಪ್, ಈಕೆಯ ಜೀವನ ಪಯಣಕ್ಕೆ ಆಧಾರವಾಗಲು ನಿರ್ಧರಿಸಿದ್ದಾರೆ. ಮನೆಯವರ ಒಪ್ಪಿಗೆಯಂತೆ ಕಳೆದ ದಿನ ಅಪರೂಪದ ಮದುವೆಗೆ ಉಡುಪಿಯ ಕಂಬಳ್ಳಿ ದೇವಸ್ಥಾನ ಸಾಕ್ಷಿಯಾಯ್ತು.

Also Read  ರಸ್ತೆ ಅಪಘಾತ: ಶಿಕ್ಷಕಿ ಮೃತ್ಯು..!

 

 

 

error: Content is protected !!
Scroll to Top