ನ.25ರಂದು ಡಾ. ಡಿ. ವೀರೇಂದ್ರ ಹೆಗ್ಗಡೆಯವರ 73ನೇ ಜನ್ಮ ದಿನದ ಸಂಭ್ರಮ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ ನ. 24: ಧರ್ಮ ಸಮನ್ವಯತೆಯ ನೆಲೆವೀಡು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 73ನೇ ಹುಟ್ಟುಹಬ್ಬ ನವೆಂಬರ್ 25ರಂದು ಶ್ರೀ ಕ್ಷೇತ್ರದಲ್ಲಿ ಕೊರೊನಾ ಹಿನ್ನಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ ನಡೆಯಲಿದೆ.

 

ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಕುಟುಂಬಸ್ಥರು, ಬಂಧುಗಳು, ಆಪ್ತರು, ಅಭಿಮಾನಿಗಳು, ಭಕ್ತರು ಗೌರವ ನಮನ ಸಲ್ಲಿಸುವರು. ಕೀರ್ತಿಶೇಷ ಹಿಂದಿನ ಧರ್ಮಾಧಿಕಾರಿಯಾಗಿದ್ದ ರತ್ನವರ್ಮ ಹೆಗ್ಗಡೆ, ರತ್ನಮ್ಮ ದಂಪತಿಯ ಜೇಷ್ಠ ಪುತ್ರರಾಗಿರುವ ಡಾ.ಹೆಗ್ಗಡೆಯವರು 1948ರ ನವೆಂಬರ್‌ 25ರಂದು ಜನಿಸಿದ ಅವರು, 1968ರ ಅಕ್ಟೋಬರ್‌ 24ರಂದು ತನ್ನ 20ನೇ ವಯಸ್ಸಿನಲ್ಲಿ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 73ನೇ ಹುಟ್ಟುಹಬ್ಬದ ಪ್ರಯುಕ್ತ ಸಮಾಜ ಭಾಂದವರಿಗೆ ಸಹಾಯಹಸ್ತ ನೀಡುವ ವಾತ್ಸಲ್ಯ ಕಾರ್ಯಕ್ರಮದ ರಾಜ್ಯಾದ್ಯಂತ ವಿತರಿಸಲ್ಪಡುವ ವಾತ್ಸಲ್ಯ ಕಿಟ್‌ ಸಾಗಿಸುವ ಟ್ರಕ್‌ಗಳಿಗೆ ಚಾಲನೆ ಕ್ಷೇತ್ರದ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ.ಈ ಸರಳ ಕಾರ್ಯಕ್ರಮದಲ್ಲಿ ಗಣ್ಯರು ಉಪಸ್ಥಿತರಿರಲಿದ್ದಾರೆ.

Also Read  ಗದ್ದಲ, ಮಾತಿನ ಚಕಮಕಿಯಲ್ಲಿ ನಡೆದ ಕುಟ್ರುಪಾಡಿ ಗ್ರಾಮ ಸಭೆ ► ಗ್ರಾ.ಪಂ. ಸದಸ್ಯರು V/S ಪಿ.ಡಿ.ಒ

 

Xl

 

 

 

error: Content is protected !!
Scroll to Top