ಬಂಟ್ವಾಳ: ಮನೆ ಬೆಂಕಿಗಾಹುತಿ ➤ ಅಪಾರ ಪ್ರಮಾಣದ ನಷ್ಟ

(ನ್ಯೂಸ್ ಕಡಬ) newskadaba.com ಬಂಟ್ವಾಳ . 24: ಸರಪಾಡಿ ಗ್ರಾಮದ ಮುನ್ನಲಾಯಿಪದವು ಎಂಬಲ್ಲಿ ವಸಂತಿ ಎಂಬವರ ಮನೆ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ವಸಂತಿ ಹಾಗೂ ಅವರ ಮನೆಮಂದಿ ಶನಿವಾರ ಸುಳ್ಯಕ್ಕೆ ಸಂಬಂಧಿಕರ ಮನೆಗೆ ಕಾರ್ಯಕ್ರಮದ ನಿಮಿತ್ತ ತೆರಳಿದ್ದರು. ಸೋಮವಾರ ಮುಂಜಾನೆ ಮನೆ ಒಳಗಿನಿಂದ ದಟ್ಟ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಮನೆಯತ್ತ ತೆರಳಿದಾಗ ಮನೆಯೊಳಗೆ ಸಾಮಗ್ರಿ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ತಕ್ಷಣ ಸ್ಥಳೀಯರು ಅಗ್ನಿಶಾಮಕದಳ ಹಾಗೂ ವಸಂತಿಯವರಿಗೆ ಕರೆ ಮಾಡಿ ಮಾಹಿತಿ ನೀಡಿದರು.

 

 

ಸ್ಥಳಕ್ಕಾಗಮಿಸಿದ ಆಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಮಕ್ಕಳ ಶಾಲಾ ಪುಸ್ತಕ,ಬಟ್ಟೆ ಬರೆ ,ಮನೆಯ ದಾಖಲೆಪತ್ರ, ದವಸಧಾನ್ಯ, ಹಂಚಿನ ಮೇಲ್ಛಾವಣಿ , ಹೊಸಮನೆ ನಿರ್ಮಿಸಲು ಮರಮಟ್ಟು ಸಂಗ್ರಹಿಸಿಟ್ಟಿದ್ದು,ಎಲ್ಲವು ಸುಟ್ಟು ಭಸ್ಮವಾಗಿದೆ. ಬೆಂಕಿಗಾಹುತಿಯಾಗಿದೆ.ಘಟನಾ ಸ್ಥಳಕ್ಕೆ ಗ್ರಾ. ಪಂ ಆಡಳಿತಾಧಿಕಾರಿ, ಪಿಡಿಓ. ಗ್ರಾಮಕರಣಿಕ ಭೇಟಿ ನೀಡಿ ಪರಿಶೀಲನೆ ನಡೆಸಿ ನಷ್ಟದ ಬಗ್ಗೆ ಅಂದಾಜಿಸಿದ್ದಾರೆ.

error: Content is protected !!
Scroll to Top