WWE ಪ್ರಿಯರಿಗೆ ಟೇಕರ್ ಶಾಕ್ ➤ ಕುಸ್ತಿ ಅಂಗಳಕ್ಕೆ ವಿದಾಯ ಹೇಳಿದ “ಅಂಡರ್ ಟೇಕರ್”

(ನ್ಯೂಸ್ ಕಡಬ) newskadaba.com ದೆಹಲಿ ನ. 24: WWE ಕುಸ್ತಿ ನೋಡಿಕೊಂಡೇ ಬೆಳೆದ ದೊಡ್ಡವರಾದವರಿಗೆ ಬೇಸರವಾಗುವ ಬೆಳವಣಿಗೆಯೊಂದರಲ್ಲಿ, ‘ದಿ ಅಂಡರ್‌ಟೇಕರ್‌’ ಕುಸ್ತಿ ಅಂಗಳಕ್ಕೆ ನಿವೃತ್ತಿ ಘೋಷಿಸಿದ್ದಾರೆ. ‘ದಿ ಅಂಡರ್‌ಟೇಕರ್‌’ ಹೆಸರಿನ ಸ್ಟೇಜ್‌ನೇಮ್‌ನಿಂದಲೇ ಜನಪ್ರಿಯರಾದ ಮಾರ್ಕ್ ವಿಲಿಯಮ್ ಕಾಲವೇ, “ನೆಮ್ಮದಿಯಿಂದ ನಿವೃತ್ತ ಜೀವನ ನಡೆಸುವ ಕಾಲ ಬಂದಿದೆ” ಎಂದು ತಮ್ಮ ಟ್ವೀಟರ್‌ ಮೂಲಕ ಹೇಳಿಕೊಂಡಿದ್ದಾರೆ.

 

55ರ ಹರೆಯದ ಈ ವೃತ್ತಿಪರ ಕುಸ್ತಿಪಟುವಿನ ವಿದಾಯಕ್ಕೆ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.  55 ವರ್ಷದ ಈ ಕುಸ್ತಿಪಟು, ತಮ್ಮ 30 ವರ್ಷಗಳ ಸುದೀರ್ಘ ಪಯಣಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದು, ದಿ ಲಾಸ್ಟ್ ರೈಡ್ ಶೋನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.ಮೂಲತಃ ಇವರು ಅಮೆರಿಕಾದ ಟೆಕ್ಸಾಸ್ ಹೂಸ್ಟನ್ ನವರಾಗಿದ್ದಾರೆ.

Also Read  ಕಡಬ: 'ಝೂಬಿ ಗೋಲ್ಡ್' ವಿಸ್ತೃತ ಚಿನ್ನಾಭರಣ ಮಳಿಗೆ ಶುಭಾರಂಭ ➤ ಶುಭಾರಂಭದ ಪ್ರಯುಕ್ತ ವಿಶೇಷ ಆಫರ್, ಲಕ್ಕೀ ಕೂಪನ್ ಡ್ರಾ

 

error: Content is protected !!
Scroll to Top