ಸಸಿಹಿತ್ಲು : ಸರ್ಫಿಂಗ್ ಬೀಚ್ ಬಳಿ ವ್ಯಕ್ತಿಯ ಶವ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು . 23: ಹಳೆಯಂಗಡಿ ಸಮೀಪದ ಸಸಿಹಿತ್ಲು ಸರ್ಫಿಂಗ್ ಬೀಚ್ ಬಳಿ ವ್ಯಕ್ತಿಯೋರ್ವರ ಶವ ಪತ್ತೆಯಾಗಿದೆ.

 

ಸುಮಾರು 65ರ ಹರೆಯದ ಗಂಡಸಿನ ಶವ ಸಸಿಹಿತ್ಲು ಎಂಡ್ ಪಾಯಿಂಟ್ ಮುಂಡ ಬೀಚ್ ಬಳಿ ಸಮುದ್ರದಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಕೂಡಲೇ ಸ್ಥಳಕ್ಕೆ ಧಾವಿಸಿ ದೋಣಿ ಮುಖಾಂತರ ಶವವನ್ನು ಸಮುದ್ರತೀರಕ್ಕೆ ತಂದಿದ್ದಾರೆ. ಇಂದು (ಸೋಮವಾರ) ಬೆಳಗಿನ ಜಾವ ವ್ಯಕ್ತಿ ಮೃತಪಟ್ಟಿರಬಹುದು ಎಂದು ಸ್ಥಳೀಯ ಪಂಚಾಯತ್ ಸದಸ್ಯ ಚಂದ್ರಕುಮಾರ್ ತಿಳಿಸಿದ್ದಾರೆ. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ

Also Read  ಪಿಲಿಕುಲದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ "ಹುಲಿ ರಾಣಿ"

 

Xl

error: Content is protected !!
Scroll to Top