ಮೊಟ್ಟೆತ್ತಡ್ಕ: ಪೌರ ಕಾರ್ಮಿಕರಿಗೆ ಹಲ್ಲೆ ➤ ಹಲ್ಲೆ ಮಾಡಿದ ವ್ಯಕ್ತಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ಮೊಟ್ಟೆತ್ತಡ್ಕ . 23: ಸ್ವಚ್ಚತೆಯ ದೃಷ್ಟಿಯಿಂದ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಕೊಡಬೇಕೆಂದು ಹೇಳಿದರೂ ಕೆಲವೊಂದು ಮನೆಯವರು ಹಸಿ ಕಸ ಒಣ ಕಸವನ್ನು ವಿಂಗಡಣೆ ಮಾಡದೆ ಕೊಡುತ್ತಿದ್ದರು. ಈ ಕುರಿತು ಪೌರ ಕಾರ್ಮಿಕರು ವಿಚಾರಿಸಿದಾಗ ಅವರ ಮೇಲೆ ಹಲ್ಲೆಯನ್ನು ನಡೆಸಿದ ಅಮಾನವೀಯ ಘಟನೆ ಮೊಟ್ಟೆತ್ತಡ್ಕದಲ್ಲಿ ನಡೆದಿದೆ.

 

 

ಇಂದು ಮೊಟ್ಟೆತ್ತಡ್ಕ ಜನತಾ ಕಾಲೋನಿಯಲ್ಲಿ ಮನೆಯೊಂದರ ಎದುರು ಇರಿಸಿದ್ದ ಕಸವನ್ನು ವಿಂಗಡಣೆ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಮೇಲಾಧಿಕಾರಿಗಳ ಸೂಚನೆಯಂತೆ ಕಸವನ್ನು ವಿಲೇವಾರಿ ಮಾಡುವುದಿಲ್ಲ ಎಂದಿದ್ದಕ್ಕೆ ಮನೆಯ ವ್ಯಕ್ತಿಯೊಬ್ಬರು ಕಸ ಸಂಗ್ರಹಕಾರರನ್ನು ನಿಂಧಿಸಿದಲ್ಲದೇ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪೌರಕಾರ್ಮಿಕರಿಗೆ ಹಲ್ಲೆ ನಡೆಸಿದ ವ್ಯಕ್ತಿಯನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ನಗರಸಭೆ ಸ್ಥಳೀಯ ಸದಸ್ಯೆ ಶೈಲಾ ಪೈ ಉಪಸ್ಥಿತರಿದ್ದರು.

Also Read  ಅಕ್ರಮ ಗೋ ಸಾಗಾಟ: ನಾಲ್ವರ ಬಂಧನ

 

 

error: Content is protected !!
Scroll to Top