ಡಿ.10ರಿಂದ ಮಂಗಳೂರು-ಮೈಸೂರು ವಿಮಾನ ಸೇವೆ ಆರಂಭ

(ನ್ಯೂಸ್ ಕಡಬ) newskadaba.com ಮಂಗಳೂರು . 23: ಮಂಗಳೂರಿನಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ವಿಮಾನಯಾನ ಸೇವೆ ಒದಗಿಸುವ ಬಹುದಿನಗಳ ಬೇಡಿಕೆ ನೆರವೇರುವ ಕಾಲ ಹತ್ತಿರವಾಗಿದೆ. ಏರ್‌ ಇಂಡಿಯಾದ ಅಲಯನ್ಸ್‌ ವಿಮಾನಯಾನ ಸಂಸ್ಥೆ ವತಿಯಿಂದ ಡಿ.10ರಿಂದ ಮಂಗಳೂರು-ಮೈಸೂರು ನಡುವೆ ವಿಮಾನ ಸೇವೆ ಆರಂಭವಾಗಲಿದೆ.

 

Xl

ಪ್ರತಿ ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಮಾತ್ರ ಈ ವಿಮಾನ ಸೇವೆ ಲಭ್ಯವಿರಲಿದೆ. ಮೈಸೂರಿನಿಂದ ಬೆಳಗ್ಗೆ 11.15ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 12.15ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಮಧ್ಯಾಹ್ನ 12.40ಕ್ಕೆ ಹೊರಡುವ ವಿಮಾನ 1.40ಕ್ಕೆ ಮೈಸೂರು ತಲುಪಲಿದೆ. ಮೈಸೂರಿನಲ್ಲಿ ಕರಾವಳಿ ಮೂಲದ 60ರಿಂದ 70 ಸಾವಿರ ಮಂದಿ ವಿವಿಧ ಉದ್ಯೋಗ, ಉದ್ಯಮ ವಲಯಗಳಲ್ಲಿ ಇದ್ದು, ಹೊಸ ವಿಮಾನಯಾನ ಸೇವೆಯಿಂದ ಇವರ ಪ್ರಯಾಣಕ್ಕೆ ಹೆಚ್ಚು ಅನುಕೂಲವಾಗಿದೆ.

Also Read  ವಿಟ್ಲ ಪರಿಸರದಲ್ಲಿ ಮುಂದುವರಿದ ಕಳ್ಳರ ಕಾಟ ► ಮನೆಯ ಮುಂಭಾಗದ ಬೀಗ ಮುರಿದು ಕಳ್ಳತನ

 

error: Content is protected !!
Scroll to Top