ಕಡಬ ಎಸ್ಎಮ್ಎ ರೀಜನಲ್ ಮಹಾಸಭೆ, ಸಮಿತಿ ಪುನಃರಚನೆ ► ಪ್ರತಿಭಾನ್ವಿತರಿಗೆ ಸ್ಮರಣಿಕೆ ನೀಡಿ ಗೌರವ

(ನ್ಯೂಸ್ ಕಡಬ) newskadaba.com ಕಡಬ,ಅ.5. ಇಲ್ಲಿಯ ರೀಜನಲ್ ಎಸ್ಎಮ್ಎ ಸಂಘಟನೆಯ ಮಹಾಸಭೆಯು ಕಡಬ ಅಲ್ಮದೀನ ಮಸ್ಜಿದ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.

ಸುಳ್ಯ, ಕಡಬ, ಬೈತಡ್ಕ ರೀಜನಲ್ ಘಟಕದ ಬೆಳ್ಳಾರೆ ಝೋನಲ್ ಅಧ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಎಸ್ಎಂಎ ಸಂಘಟನೆಯ ಸಮಿತಿಯನ್ನು ಪುನಃರಚಿಸಿ ಪದಾಧಿಕಾರಿಗಳ ಜವಾಬ್ದಾರಿಯನ್ನು ವಿವರಿಸಿದರು. ಎಸ್ಎಮ್ಎ ಸಂಘಟನೆಯ ಗೌರವಾಧ್ಯಕ್ಷರಾದ ಮರ್ದಾಳ ತಕ್ವೀಯತುಲ್ ಇಸ್ಲಾಂ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಶಾಹುಲ್ ಹಮೀದ್ ತಂಙಳ್ ದುಃವಾರ್ಶೀವಚನ ನೀಡಿದರು. ಕಲ್ಲುಗುಡ್ಡೆ ನೂರುಲ್ ಹುದಾ ಮಸ್ಜಿದ್ನ ಸದರ್ ಮೊಹಲ್ಲಿಂ ಅಬ್ದುಲ್ ನಾಸಿರ್ ಸಹದಿ ಅಲ್ಲಾಹುವಿನ ನಾಮದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮರ್ದಾಳ ಜುಮ್ಮಾ ಮಸೀದಿಯ ಖತೀಬರಾದ ಎಸ್ಎಂಎ ಕಡಬ ರೇಂಜ್ ಅಧ್ಯಕ್ಷ ಹನೀಪ್ ಸಖಾಫಿ ಪ್ರಭಾಷಣಗೈದು ರಾಜ್ಯಾದ್ಯಂತ ನೂರಾರು ಮದರಸಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ದೀನಿ ವಿದ್ಯಾಭ್ಯಾಸ ಕಲಿಯುತ್ತಿದ್ದು ಇಹಪರಗಳಲ್ಲಿ ವಿಜಯಿಯಾಗಳು ದೀನಿ ವಿದ್ಯಾಭ್ಯಾಸ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೇ ನಡೆದ ಪಬ್ಲಿಕ್ ಪರೀಕ್ಷೆಯಲ್ಲಿ ನಮ್ಮ ಕಡಬ ರೀಜನಲ್ನ ಕಲ್ಲಾಜೆ ಮೊಹಿದ್ದೀನ್ ಕುಂಞಿಯವರ ಪುತ್ರಿ ನಯಿಮುನ್ನಿಸಾ ರಾಜ್ಯಕ್ಕೆ ಪ್ರಥಮ ಸ್ಥಾನ (ಪಿಯುಸಿ ಅರೇಬಿಲ್ ಪಬ್ಲಿಕ್) ಗಳಿಸಿ ನಮ್ಮ ಜಿಲ್ಲೆಗೆ ಹೆಸರನ್ನು ತಂದುಕೊಟ್ಟಿದ್ದು ಅತೀವ ಸಂತೋಷವಾಗಿದ್ದು ಇಂತಹ ಅದೆಷ್ಟೋ ನಮ್ಮ ಜಿಲ್ಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರತೀಭಾನ್ವಿತರಾಗಿ ತೇರ್ಗಡೆ ಹೊಂದಿರುವುದು ನಮ್ಮ ಈ ಭಾಗಕ್ಕೆ ಸಂದ ಗೌರವಾಗಿದೆ. ಇದೇ ರೀತಿ ಪ್ರತೀ ಒಂದು ಮದರಸದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಗಳಿಸುವಂತಾಗಲಿ ಎಂದು ಅಲ್ಲಾಹುವಿನಲ್ಲಿ ಪ್ರಾರ್ಥಿಸಿದ ಅವರು ಎಸ್ಎಂಎ ಸಂಘಟನೆಯ ಮಹತ್ವವನ್ನು ವಿವರಿಸಿದಲ್ಲದೆ ಸಂಘವನ್ನು ಯಾವ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಬೇಕಾಗಿದೆ ಎಂದು ಮಾರ್ಗದರ್ಶನ ನೀಡಿದರು.

Also Read  ಸುಳ್ಯ: ಮಗು ಹಟ ಹಿಡಿಯಿತೆಂದು ಸಟ್ಟುಗದಿಂದ ಸುಟ್ಟ ಪಾಪಿ ತಾಯಿ

ಈ ಸಂಧರ್ಭದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿಯ ಪರವಾಗಿ ಅವರ ತಂದೆ ಮೊಹಿದ್ದೀನ್ ಕುಂಞಿ ಕಲ್ಲಾಜೆಯವರಿಗೆ ಸಮಿತಿಯ ವತಿಯಿಂದ ಸ್ಮರಣಿಕೆ ಹಾಗೂ ಸೂಕ್ತ ಬಹುಮಾನವನ್ನು ನೀಡಲಾಯಿತು. ಬಳಿಕ ಎಸ್ಎಂಎ ಕಡಬ ರೀಜನಲ್ ಸಮಿತಿಯನ್ನು ಪುನಃರಚಿಸಲಾಯಿತು. ಗೌರವಾಧ್ಯಕ್ಷರಾಗಿ ಶಾಹುಲ್ ಹಮೀದ್ ತಂಙಳ್ ಮರ್ದಾಳ, ಗೌರವ ಸಲಹೆಗಾರರಾಗಿ ಹಾಜಿ ಸಯ್ಯದ್ ಮೀರಾ ಸಾಹೇಬ್ ಕಡಬ, ಸಲಹೆಗಾರರಾಗಿ ಅಬ್ದುಲ್ ರಝಾಕ್ ಬಾಖವಿರವರನ್ನು ನೇಮಿಸಲಾಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಮೊಹಿದ್ದೀನ್ ಕುಂಞಿ ಕಲ್ಲಾಜೆ, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಸಹದಿ ಪನ್ಯ, ಉಪಾಧ್ಯಕ್ಷರಾಗಿ ಕಲ್ಲುಗುಡ್ಡೆ ನೂರುಲ್ ಹುದಾ ಮಸ್ಜಿದ್ನ ಅಧ್ಯಕ್ಷರಾದ ಖಾದರ್ ಸಾಹೇಬ್ ಇವರನ್ನು ಆಯ್ಕೆ ಮಾಡುವುದರೊಂದಿಗೆ ಆರ್ಥಿಕ ಮತ್ತು ಮಾಧ್ಯಮ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಉಪಾಧ್ಯಕ್ಷ ಅಬ್ಬಾಸ್ ಕೋಡಿಂಬಾಳರನ್ನು ಸಂಘಟನಾ ಜವಾಬ್ದಾರಿಯನ್ನು ನೀಡಲಾಗಿದ್ದು ಉಪಾಧ್ಯಕ್ಷರಾದ ಸಯ್ಯದ್ ಇಕ್ಬಾಲ್ರವರಿಗೆ ಕ್ಷೇಮನಿಧಿ ಜವಾಬ್ದಾರಿಯನ್ನು ವಹಿಸಲಾಗಿತ್ತು. ಮತ್ತೊಬ್ಬ ಉಪಾಧ್ಯಕ್ಷ ಆದಂ ಕುಂಡೋಳಿಯವರಿಗೆ ವಕ್ಫ್‌ ಜವಾಬ್ದಾರಿಯನ್ನು ನೀಡಲಾಯಿತು. ಜೊತೆಕಾರ್ಯದರ್ಶಿಗಳಾಗಿ ಅಬ್ದುಲ್ ರಶೀದ್ ಸಿ.ಎಂ, ರವೂಫ್ ಲತೀಫಿ ಮುಸ್ಲಿಯಾರ್, ಅಜೀಜ್ ಲತೀಪಿ ಮುಸ್ಲಿಯಾರ್, ಅಶ್ರಫ್ ಝೌಹರಿ ಮುಸ್ಲಿಯಾರ್ರನ್ನು ಆಯ್ಕೆಮಾಡಿದ್ದರೆ ಹಕೀಂ ಮದನಿ ಕಲ್ಲಾಜೆಯವರು ಕೋಶಾಧಿಕಾರಿಯಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಬೈದ್ ಸಖಾಫಿ, ಸಯ್ಯದ್ ಬಶೀರ್ ಕಲ್ಲುಗುಡ್ಡೆ, ಅಬೂಬಕ್ಕರ್ ಕೋಡಿಂಬಾಳ, ಶುಕುರ್ ಅಡ್ಡಗದ್ದೆ, ಶೇಖ್ ಭಾಶಾ ಹೊೖಗೆಕೆರೆ, ಇಬ್ರಾಹಿಂ ಕಡಬ, ಅಬೂಬಕ್ಕರ್ ಕೊಡೆಂಕಿರಿ, ಅಬ್ದುಲ್ ರಝಾಕ್ ಮುಸ್ಲಿಯಾರ್, ಹನೀಫ್ ಮರ್ದಾಳ, ಯೂನುಸ್ ಕೋಡಿಕಂಡ, ಇಜಾಜ್ ಕಡಬ, ಸತ್ತಾರ್ ಪನ್ಯರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು. ಅಲ್ಲದೆ ಝೋನಲ್ ಸಮಿತಿಗೆ ಕಡಬ ರೀಜನಲ್ನಿಂದ ಅಧ್ಯಕ್ಷರಾದ ಮೊಯಿದ್ದೀನ್ ಕುಂಞಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ನಾಸಿರ್ ಸಹದಿ, ಹನೀಪ್ ಮರ್ದಾಳರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆಮಾಡಲಾಯಿತು. ಹನೀಪ್ ಮರ್ದಾಳ ವರದಿ ವಾಚಿಸಿದರು. ಅಬ್ದುಲ್ ನಾಸಿರ್ ಸಹದಿ ಸ್ವಾಗತಿಸಿ, ವಂದಿಸಿದರು.

Also Read  ಅರಂತೋಡು:ನಾಳೆ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಮೃತ ಉದ್ಯಾನವನ ➤ಅಮೃತ ಮುಕ್ತಿಧಾಮ ಹಾಗೂ ಅಮೃತ ಸಭಾಂಗಣ ಉದ್ಘಾಟನಾ ಕಾರ್ಯಕ್ರಮ

error: Content is protected !!
Scroll to Top