24 ಗಂಟೆಗಳಲ್ಲಿ ಒಂದರ ಹಿಂದೊಂದರಂತೆ 78 ಗೋವುಗಳು ಮೃತ್ಯು

(ನ್ಯೂಸ್ ಕಡಬ) newskadaba.com ಜೈಪುರ ನ. 23: ತೋಟವೊಂದರಲ್ಲಿ 24 ಗಂಟೆಗಳ ಅವಧಿಯಲ್ಲಿ ಒಂದರ ಹಿಂದೊಂದರಂತೆ ಕನಿಷ್ಠ 78 ಹಸುಗಳು ಮೃತಪಟ್ಟಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದು, ಹಸುಗಳು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿವೆ ಎಂದು ತಿಳಿದು ಬಂದಿದೆ. ರಾಜಸ್ಥಾನದ ಚುರು ಜಿಲ್ಲೆಯ ತೋಟವೊಂದರಲ್ಲಿ ಈ ಘಟನೆ ನಡೆದಿದೆ. ಸರ್ದರ್ಶಹರ್‌ ಬಿಲ್ಲುಪಸ್ ರಾಂಪುರ ಗ್ರಾಮದ ಖಾಸಗಿ ಜಮೀನಿನಲ್ಲಿ ಈ ಘಟನೆ ನಡೆದಿದೆ. ಆಹಾರದಲ್ಲಿ ವಿಷ ವಸ್ತುಗಳನ್ನು ಸೇವಿಸಿ ಹಸುಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ.

ಹಸುಗಳಿಗೆ ನೀಡಲಾಗಿರುವ ಆಹಾರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಸುಗಳಿಗೆ ಆಹಾರ ನೀಡಿದ ಬಳಿಕ ಈ ಘಟನೆ ನಡೆದಿರುವುದರಿಂದಾಗಿ ಆಹಾರದಲ್ಲಿ ವಿಷದ ಮಾದರಿಗಳಿರುವ ಬಗ್ಗೆ ಶಂಕೆ ಹೆಚ್ಚಾಬಲಗೊಂಡಿದೆ.

Also Read  ಕಣ್ಣು ತೆರೆದ ನ್ಯಾಯದೇವತೆ- ಸುಪ್ರೀಂ ಕೋರ್ಟ್‌ನಲ್ಲಿ ಮರುರೂಪಿಸಿದ ಪ್ರತಿಮೆ ಅಳವಡಿಸುವಂತೆ ಸೂಚನೆ

error: Content is protected !!
Scroll to Top