ಮೂತ್ರಪಿಂಡ ವೈಫಲ್ಯದಿಂದ ಕಿರುತೆರೆ ನಟಿ ನಿಧನ

(ನ್ಯೂಸ್ ಕಡಬ) newskadaba.com ಮುಂಬೈ . 23 :ಕ್ಲಾಸ್ ಆಫ್ 2020 ಮತ್ತು ಸೇಠ್ ಜಿ ಮುಂತಾದ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಲೀನಾ ಆಚಾರ್ಯ ಅವರು ಮೂತ್ರಪಿಂಡ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ನಟಿ ಲೀನಾ ಆಚಾರ್ಯ ಅವರ ಜೊತೆ ನಟಿಸಿದ್ದ ನಟ ರೋಹನ್‌ ಮೆಹ್ರಾ ಮಾಹಿತಿ ನೀಡಿದ್ದಾರೆ. ಮೆಹ್ರಾ ಅವರು “ಕ್ಲಾಸ್‌ ಆಫ್ 2020′ ನಲ್ಲಿ ಆಚಾರ್ಯ ಜತೆಗೆ ನಟಿಸಿದ್ದರು. ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ನಟ ಆಯುಷ್‌ ಆನಂದ್‌ ಲೀನಾ ತನಗೆ ಇದ್ದ ಆರೋಗ್ಯ ಸಮಸ್ಯೆಯನ್ನು ಯಾರಲ್ಲೂ ಹೇಳಿಕೊಂಡಿರಲಿಲ್ಲ. ಶನಿವಾರವಷ್ಟೇ ಅವರ ಸಹೋದರನ ಜತೆಗೆ ಮಾತುಕತೆ ನಡೆಸಿದಾಗ ಅವರಿಗೆ ಮೂತ್ರಪಿಂಡ ಸಮಸ್ಯೆ ಇದ್ದ ಬಗ್ಗೆ ಮಾಹಿತಿ ತಿಳಿದುಬಂತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಕ್ಲಾಸ್ ಆಫ್ 2020 ಮುಂತಾದ ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಅಲ್ಲದೆ ಬಾಲಿವುಡ್‌ನ ಹಿಚ್ಕಿ ಸಿನಿಮಾದಲ್ಲೂ ಆಕೆ ನಟಿಸಿದ್ದರು.  ‘ಲೀನಾ ಕಳೆದ ಒಂದೂವರೆ ವರ್ಷದಿಂದ  ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ತಾಯಿ ಅವರಿಗೆ ಮೂತ್ರಪಿಂಡ ದಾನ ಮಾಡಿದ್ದರು. ಆದರೂ ಆಕೆ ಬದುಕಲಿಲ್ಲ’ ಎಂದು ಶೇಠ್‌ ಜೀ ಸಹನಟ ವರ್ಷಿಪ್‌ ಖನ್ನಾ ಮಾಹಿತಿ ನೀಡಿದ್ದಾರೆ.

Also Read  ಕಾಸರಗೋಡು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ 137 ವರ್ಷ ಜೈಲು ಶಿಕ್ಷೆ; 7.5 ಲ.ರೂ ದಂಡ

 

 

error: Content is protected !!
Scroll to Top