ಕುಕ್ಕೆ ಶ್ರೀ ಸುಬ್ರಹ್ಮಣ್ಯ: 180 ಕೊಠಡಿಗಳುಳ್ಳ “ಅನಘ” ವಸತಿಗೃಹ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಕುಕ್ಕೆ ಶ್ರೀ ಸುಬ್ರಹ್ಮಣ್ಯ . 23: ಕಳೆದ ದಿನ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಿರ್ಮಿಸಲ್ಪಟ್ಟ 180 ಕೊಠಡಿಗಳುಳ್ಳ “ಅನಘ” ವಸತಿಗೃಹವನ್ನು ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟನೆ ಮಾಡಿ ಲೋಕಾರ್ಪಣೆ ಮಾಡಿದ್ದಾರೆ.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಎಸ್.ಅಂಗಾರ ರವರು ವಹಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ರೂಪ ಎಂ,ಜೆ, ಸುಳ್ಯ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಕಡಬ ತಾಲೂಕು ಪಂ. ಸದಸ್ಯ ಅಶೋಕ್ ನೆಕ್ರಾಜೆ, ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಹನ್ ರಾಮ್ ಸುಳ್ಳಿ, ಪ್ರಸನ್ನ ದರ್ಬೆ, ವನಜಾ ವಿ ಭಟ್, ಮನೋಹರ ರೈ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಡಿಸಿ ರೂಪಾ ಸ್ವಾಗತಿಸಿ, ಅಛೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ವಂದಿಸಿದರು. ಕಾರ್ಯಕ್ರಮವನ್ನು ರತ್ನಾಕರ ಸುಬ್ರಹ್ಮಣ್ಯ ರವರು ನಿರೂಪಿಸಿದರು.

Also Read  ಶೀಘ್ರದಲ್ಲೇ ಬ್ಯಾನ್ ಆಗಲಿದೆ 10 ಅಂಕಿಗಳ ಮೊಬೈಲ್ ನಂಬರ್ ಗಳು ! ➤ ಟ್ರಾಯ್ ನಿಂದ ಮಹತ್ವದ ನಿರ್ಧಾರ

 

Xl

error: Content is protected !!
Scroll to Top