ಉಳ್ಳಾಲ: ಒಂಬತ್ತನೇ ಅಂತಸ್ತಿನಿಂದ ಬಿದ್ದು ಭದ್ರತಾ ಕಾವಲುಗಾರ ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ . 23: ಉಳ್ಳಾಲ ಠಾಣಾ ವ್ಯಾಪ್ತಿಯ ನಗರಸಭೆ ಕಚೇರಿ ಬಳಿ ಇರುವ ಇನ್ ಪಾಲ ಬಹುಮಹಡಿ ಕಟ್ಟಡದಲ್ಲಿ ಭದ್ರತಾ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಒಂಬತ್ತನೇ ಅಂತಸ್ತಿನಿಂದ ಕಾಲು ಜಾರಿ ಕೆಳಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

 

Xl

 

ಮೃತಪಟ್ಟ ವ್ಯಕ್ತಿಯನ್ನು ಚೆಂಬುಗುಡ್ಡೆ ನಿವಾಸಿ ಮುತ್ತುರಾಜ(55) ಎಂದು ಗುರುತಿಸಲಾಗಿದೆ. ಇವರು ಟ್ಯಾಂಕ್ ನಲ್ಲಿ ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಲೆನಾಡು, ಕರಾವಳಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ➤ ಮುಳುಗಡೆಯಾದ ಕುಮಾರಧಾರ ಸ್ನಾನಘಟ್ಟ

 

error: Content is protected !!
Scroll to Top