ಮುರುಡೇಶ್ವರದಲ್ಲಿ ಜಾನುವಾರು ಕಳ್ಳತನ ಯತ್ನ ➤ ಓರ್ವನ ಬಂಧನ ,ನಾಲ್ವರು ಪರಾರಿ

(ನ್ಯೂಸ್ ಕಡಬ) newskadaba.com ಭಟ್ಕಳ . 21:  ಮೇಯಲು ಬಿಟ್ಟ ಜಾನುವಾರುವೊಂದನ್ನು ಮರಕ್ಕೆ ಕಟ್ಟಿ ಹಾಕಿ, ರಾತ್ರಿ ವೇಳೆ ವಾಹನದಲ್ಲಿ ಕದ್ದೊಯ್ಯಲು ಯತ್ನಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲು ಯಶಸ್ವಿಯಾಗಿರುವ ಘಟನೆ ತಾಲೂಕಿನ ಮುರುಡೇಶ್ವರ ಕೈಕಿಣಿ ಮುಡಕೇರಿ ರೇಲ್ವೇ ಬಿಡ್ಜ್ ಹತ್ತಿರ ಗುರುವಾರ ರಾತ್ರಿ ನಡೆದಿದೆ.

Xl

ಬಂಧಿತನನ್ನು ಮುರುಡೇಶ್ವರ ನ್ಯಾಶನಲ್ ಕಾಲೋನಿ 5ನೇ ಕ್ರಾಸ್ ನಿವಾಸಿ ಯಾಸೀನ್ ತಂದೆ ಇಸ್ಮಾಯಿಲ್ ದೊನ್ನಾ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ. ಈ ಕುರಿತು ಜಾನುವಾರು ಮಾಲಕ ಕೈಕಿಣಿ ಮುಡಕೇರಿಯ ಚಂದ್ರಶೇಖರ ವಿಷ್ಣು ನಾಯ್ಕ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Also Read  ಪಾಂಗಾಳದ ಶರತ್ ಶೆಟ್ಟಿ ಕೊಲೆ ಪ್ರಕರಣ ➤ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯ

 

error: Content is protected !!
Scroll to Top