ಅನಾವಶ್ಯವಾಗಿ ಬಂದ್ ಮಾಡಿದರೆ ಸಹಿಸುವುದಿಲ್ಲ ➤ ಕನ್ನಡಪರ ಸಂಘಟನೆಗಳಿಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ BSY

(ನ್ಯೂಸ್ ಕಡಬ) newskadaba.com ಬೆಂಗಳೂರು . 21: ರಾಜ್ಯದಲ್ಲಿ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 5ರಂದು ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಈ ಕುರಿತು ಸಿಎಂ ಬಿಎಸ್​ ಯಡಿಯೂರಪ್ಪ ಕನ್ನಡಪರ ಸಂಘಟನೆಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಅನಾವಶ್ಯಕವಾಗಿ ಬಂದ್ ಮಾಡಿದ್ರೆ ನಾನು ಸಹಿಸುವುದಿಲ್ಲ. ನಾನು ಎಲ್ಲವನ್ನೂ ಗಮನಿಸುತ್ತಿದ್ದೇನೆ. ಪ್ರತಿಕೃತಿ ದಹಿಸೋದು, ಬಂದ್ ಮಾಡೋದು ಸರಿಯಲ್ಲ ಶಾಂತಿಯುತವಾಗಿ ಬೇಕಿದ್ರೆ ಪ್ರತಿಭಟನೆ ಮಾಡಲಿ. ಆದರೆ ವಿನಾಕಾರಣ ಬಂದ್ ಮಾಡಿದ್ರೆ ಕಠಿಣ ಕ್ರಮ, ಬಿಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸಿಎಂ ಬಿಎಸ್ ವೈ ಎಚ್ಚರಿಕೆ ನೀಡಿದ್ದಾರೆ

ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ನಾನು ಕನ್ನಡಿಗರ, ಕನ್ನಡದ ಪರವಾಗಿ ಇರುವವನು. ಕನ್ನಡಿಗರಿಗೆ ಏನೇನು ಹೆಚ್ಚಿನದಾಗಿ ಸವಲತ್ತು ಕೊಡಬೇಕು, ಅದನ್ನು ಕೊಡಲು ಸಿದ್ದನಿದ್ದೇನೆ. ಆದರೆ ಬೇರೊಂದು ಕಾರಣ ಇಟ್ಟುಕೊಂಡು ಬಂದ್ ಕರೆ ಕೊಡುವುದು ಸೂಕ್ತ ಅಲ್ಲ. ಜೊತೆಗೆ ಜನರು ಕೂಡ ಇದನ್ನು ಮೆಚ್ಚುವುದಿಲ್ಲ. ಬಲವಂತವಾಗಿ ಬಂದ್ ಮಾಡೋಕೆ ನಾನು ಎಲ್ಲಿಯೂ ಅವಕಾಶ ಕೊಡೋದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.

Also Read  ಮಂಗಳೂರು: ಅಪ್ರಾಪ್ತ ಮಗಳ ಮೇಲೆಯೇ ಲೈಂಗಿಕ‌ ದೌರ್ಜನ್ಯ ➤ ಆರೋಪಿ ರೌಡಿಶೀಟರ್ ಬಂಧನ

 

 

Xl

ಮುಂದುವರೆದ ಅವರು, ಪ್ರತಿಕೃತಿ ದಹಿಸೋದು, ಬಹಳ ಕೆಟ್ಟದಾಗಿ ನಡೆದುಕೊಳ್ಳೋದನ್ನೆಲ್ಲಾ ನಾನು ಗಮನಿಸುತ್ತಿದ್ದೇನೆ. ನಾನು ಬಹಳ ಬಿಗಿಯಾದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಕೆಲವರು ಏನೋ ಮಾಡೋಕೆ ಹೊರಟಿದ್ದಾರೆ. ಅದನ್ನು ನಾನು ಸಹಿಸೋದಿಲ್ಲ. ಅವರು ಇನ್ನಾದ್ರು ಸುಮ್ಮನೆ ಇರಬೇಕು. ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಕೆಲಸ ಮಾಡ್ತಿದೆ. ಇದರಲ್ಲಿ ನಾವು ಯಾವುದೇ ಭೇದಭಾವವನ್ನು ಮಾಡೋದಿಲ್ಲ ಎಂದು ಒತ್ತಿ ಹೇಳಿದರು.

Also Read  ರಾಜ್ಯ ಸರ್ಕಾರದ ಮಹತ್ವದ 'ಸಚಿವ ಸಂಪುಟ ಸಭೆ' ನಿಗದಿ

error: Content is protected !!
Scroll to Top