ಪಾಕ್ ಗುಂಡಿನ ದಾಳಿ ➤ ಭಾರತೀಯ ಯೋಧ ಹುತಾತ್ಮ

(ನ್ಯೂಸ್ ಕಡಬ) newskadaba.com ಶ್ರೀನಗರ . 21: ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ವಲಯದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದರಿಂದ ಉಂಟಾದ ಗುಂಡಿನ ಚಕಮಕಿಯಲ್ಲಿ ಇಂದು ಭಾರತೀಯ ಯೋಧ ಹುತಾತ್ಮರಾಗಿದ್ದಾರೆ.

 

 

ಘಟನೆಯಲ್ಲಿ ಹವಲ್ದಾರ್ ಒಬ್ಬರು ತೀವ್ರವಾಗಿ ಗಾಯಗೊಂಡು, ನಂತರ ಸಾವನ್ನಪ್ಪಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಕಿಸ್ತಾನದ ಈ ದಾಳಿಗೆ ಭಾರತೀಯ ಸೇನೆಯು ತೀವ್ರವಾಗಿ ಪ್ರತೀಕಾರ ತೀರಿಸಿತು. ಎರಡೂ ದೇಶಗಳ ನಡುವೆ ಸ್ವಲ್ಪ ಸಮಯದವರೆಗೆ ಗಡಿಯಾಚೆಗೆ ಗುಂಡಿನ ದಾಳಿ ಮುಂದುವರೆದಿರುವುದಾಗಿ ತಿಳಿದುಬಂದಿದೆ.

Also Read  ಮಂಗಳೂರು: ದರೆಗುಡ್ಡೆ ಗ್ರಾಮಸಭೆ

 

Xl

 

error: Content is protected !!
Scroll to Top