ಕಸ್ತೂರಿ ರಂಗನ್ ವರದಿ ವಿರುದ್ಧ ಧ್ವನಿ ➤ ಪ್ರತಿಭಟನಾ ಸಭೆಯ ಪೂರ್ವಭಾವಿಯಾಗಿ ಇಂದು ಬೈಕ್ ಜಾಥಾ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ . 21: ಕಸ್ತೂರಿ ರಂಗನ್ ವರದಿ ವಿರುದ್ಧದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನ.27 ರಂದು ನಡೆಯಲಿರುವ ಪ್ರತಿಭಟನಾ ಸಭೆಯ ಪೂರ್ವಭಾವಿಯಾಗಿ ಹಮ್ಮಿಕೊಂಡ ಜಾಗೃತಿ ಜಾಥಾ ಇಂದು ಮಧ್ಯಾಹ್ನ 1.30 ಕ್ಕೆ ಕುಕ್ಕೆ ಸುಬ್ರಹ್ಮಣ್ಯ ದಿಂದ ಹೊರಡಲಿದೆ.

 

 

ಯಜ್ಞೇಶ್ ಆಚಾರ್ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ , ರಾಜಕೀಯ ನೇತಾರರಾದ ಹರೀಶ್ ಇಂಜಾಡಿ , ಎಸ್ ಎನ್ ರಾಜೇಶ್ ಮತ್ತಿತರರು ಈ ಜಾಥಾದಲ್ಲಿ ಉಪಸ್ಥಿಂತರಿರಲಿದ್ದಾರೆ. ಬಳಿಕ ಅಪರಾಹ್ನ 2 ಗಂಟೆ ನಂತರ ಗುತ್ತಿಗಾರಿಗೆ ತೆರಳಲಿದ್ದಾರೆ. ಬಳಿಕ ದುಗ್ಗಲಡ್ಕದಲ್ಲಿ ಪ್ರಮುಖ ನೇತಾರರು ಮಾತನಾಡಲಿದ್ದು ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಸಮಾರೋಪ ಭಾಷಣ ನಡೆಯಲಿದೆ. ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡಲಿದ್ದಾರೆ. ಈ ಅಮೋಘವಾದ ಜಾಥಾದಲ್ಲಿ ಆನೇಕ ಸಂಘಟನೆ, ಪಕ್ಷಗಳ ಪ್ರಮುಖಕರು ಭಾಗಿಯಾಗಲಿದ್ದಾರೆ.

Also Read  ವಿಶ್ವಕಪ್ ಗೆ ಫಿಟ್: ಶಾದಾಬ್ ಖಾನ್

 

 

error: Content is protected !!
Scroll to Top