ಬೆಳ್ತಂಗಡಿ: SSLC ವಿದ್ಯಾರ್ಥಿ ಮೃತ್ಯು ➤ ಸಾವಿನ ಸುತ್ತ ಅನುಮಾನದ ಹುತ್ತ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ನ. 21:  ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೊರ್ವ ನಿಗೂಡವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.  ಆರಬೋಂಡಿ ಗ್ರಾಮದ ಕೋಡ್ಯೆಲು ಮನೆ ನಿವಾಸಿ ನಾರಾಯಣ ಶೆಟ್ಟಿ ಎಂಬುವರ ಪುತ್ರ ಸಮರ್ಥ (16) ಮೃತ ಪಟ್ಟ ಬಾಲಕ. ಈತ ಸಿದ್ಧಕಟ್ಟೆ ಗುಣಶ್ರೀ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.

ನವೆಂಬರ್ 19 ರ ಗುರುವಾರದಂದು ನೋಟ್ಸ್ ಬುಕ್ ತಿದ್ದುಪಡಿಗಾಗಿ ಶಾಲೆಗೆ ತೆರಳಿದ್ದಾನೆ. ಬಳಿಕ ಸಂಜೆಯಾದರೂ ಮನೆಗೆ ವಾಪಾಸ್ಸಾಗದೆ ನಾಪತ್ತೆಯಾಗಿದ್ದ. ಇದರಿಂದ ಗಾಬರಿಗೊಂಡ ಮನೆಯವರು ಮನೆಯ ಸುತ್ತ ಮುತ್ತಾ ಹುಡುಕಾಡಿದಾಗ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಈತನ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಈ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಎದ್ದಿದೆ. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Also Read  ಬೆಳ್ತಂಗಡಿ: ಟೆಲಿಗ್ರಾಂ ಮೂಲಕ ಸಂದೇಶ ಕಳುಹಿಸಿ ಶಿಕ್ಷಕಿಗೆ ಬೆದರಿಕೆ - ಆರೋಪಿ ಅರೆಸ್ಟ್…!

 

error: Content is protected !!
Scroll to Top