ಪುತ್ತೂರು : ಮಲಗಿದ್ದ ಸ್ಥಿತಿಯಲ್ಲೇ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಬಲ್ನಾಡು . 21: ಬಲ್ನಾಡು ಗ್ರಾಮದ ಪಾಂಡಿಲ್ತಡ್ಕ ವ್ಯಕ್ತಿಯೊಬ್ಬರು ಖಾಯಿಲೆಯಿಂದ ಬಳಲುತ್ತಿದ್ದು, ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲೇ ಇಂದು ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಬಾಬು ಮುಗೇರ ಎಂದು ಗುರುತಿಸಲಾಗಿದೆ.

 

 

ಬಾಬು ಮುಗೇರ ಅವರು ಟಿ.ಬಿ. ಕಾಯಿಲೆಯಿಂದ ಬಳಲುತ್ತಿದ್ದು, ಮಧ್ಯವೆಸನಿಯಾಗಿದ್ದರು. ಕಳೆದ ಮೂರು ವರ್ಷಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಅವರ ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋದವರು ಬಂದಿರಲಿಲ್ಲ. ಈ ನಡುವೆ ಮಧ್ಯವೆಸನಿಯಾಗಿದ್ದ ಬಾಬು ಮುಗೇರ ರವರು ಖಾಯಿಲೆಗೆ ಸರಿಯಾಗಿ ಚಿಕಿತ್ಸೆಗೆ ಒಳಪಡದೆ ಮೃತಪಟ್ಟಿದ್ದಾರೆ. ಇವರ ಅಣ್ಣ ಸಹೋದರನ ಮನೆಯ ಎದುರು ಹಗಲು ವಿದ್ಯುತ್ ದೀಪ ಬೆಳಕನ್ನು ನೋಡಿ ಮನೆಯ ಹತ್ತಿರ ಹೋದಾಗ ಒಳಗಿನಿಂದ ವಾಸನೆ ಬರುತ್ತಿರುವುದನ್ನು ಗಮನಿಸಿ ಮನೆಯ ಕಿಟಕಿಯಿಂದ ನೋಡಿದಾಗ ಸಹೋದರ ಬಾಬು ಮುಗೇರ ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತರ ಸಹೋದರ ಅಣ್ಣು ಮುಗೇರ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಘಟನೆಯ ಕುರಿತು ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Also Read  ಇಂದು ಕಡಬದಲ್ಲಿ ರಕ್ತದಾನ ಶಿಬಿರ, ರಕ್ತವರ್ಗೀಕರಣ, ಮಧುಮೇಹ ಪರೀಕ್ಷೆ

 

Xl

error: Content is protected !!
Scroll to Top