ಶೀಘ್ರವೇ ರಾಜ್ಯದಲ್ಲಿ ಆನ್ಲೈನ್ ‘ಗೇಮ್’ ನೀಷೇದಕ್ಕೆ ಕಾನೂನು

(ನ್ಯೂಸ್ ಕಡಬ) newskadaba.com ಬೆಂಗಳೂರು . 21: ಆನ್ ಲೈನ್ ಗೇಮ್ ಪ್ರಿಯರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದ್ದು, ಶೀಘ್ರವೇ ಆನ್ ಲೈನ್ ಗೇಮ್ ಗಳನ್ನು ನಿಷೇಧಿಸುವ ಸಂಬಂಧ ಹೊಸ ಕಾನೂನು ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

 

ಆನ್ ಲೈನ್ ಗೇಮ್ ಗಳಿಗೆ ಯುವಕರು ಬಲಿಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಾನೂನು ರೂಪಿಸಲಿದೆ. ಈಗಾಗಲೇ ಅನೇಕ ರಾಜ್ಯಗಳಲ್ಲಿ ಆನ್ ಲೈನ್ ಗೇಮ್ ನಿಷೇಧಿಸಲಾಗಿದೆ. ಅಲ್ಲಿನ ಸರ್ಕಾರಗಳು ಯಾವ ಯಾವ ನಿಯಮ ಮತ್ತು ಕಾನೂನುಗಳನ್ನು ಜಾರಿಗೊಳಿಸಿವೆ ಎಂಬ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಶೀಘ್ರದಲ್ಲೇ ರಾಜ್ಯದಲ್ಲೂ ನಿಷೇಧ ಹೇರುವುದು ನಿಶ್ಚಿತ ಎಂದರು.

Also Read  ಇಂದಿರಾ ಕ್ಯಾಂಟೀನ್ ಉಪಹಾರದಲ್ಲಿ ಜಿರಳೆ ಹಾಕಿದ್ದ ಪ್ರಕರಣ ► ಇಬ್ಬರು ಪೊಲೀಸ್ ವಶಕ್ಕೆ

error: Content is protected !!
Scroll to Top