(ನ್ಯೂಸ್ ಕಡಬ) newskadaba.com ಪುತ್ತೂರು ನ. 21: ಪುತ್ತೂರು-ಉಪ್ಪಿನಂಗಡಿ ರಸ್ತೆಯ 34 ನೇ ನೆಕ್ಕಿಲಾಡಿ ಗ್ರಾಮದಲ್ಲಿ ಮರಳು ಸಾಗಾಟದ ಪಿಕ್ ಅಪ್ ಜೀಪು ಹಾಗೂ ಆ್ಯಕ್ಟೀವಾ ನಡುವೆ ಢಿಕ್ಕಿ ಹೊಡೆದಿದ್ದು, ಆ್ಯಕ್ಟೀವಾ ಸವಾರ ಗಾಯಾಗೊಂಡ ಘಟನೆ ಇಂದು ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಯು.ಜಿ.ರಾಧಾರವರೆಂದು ಗುರುತಿಸಲಾಗಿದೆ.
ಯು.ಜಿ ರಾಧಾರವರು ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿ ಶಾಸಕ ಸಂಜೀವ ಮಠಂದೂರುರವರ ಜೊತೆ ಮಾತಾನಾಡಲು ಉಪ್ಪಿನಂಗಡಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿತ್ತು. ಢಿಕ್ಕಿಯ ರಭಸಕ್ಕೆ ಕೈ ಕಾಲು ಗಾಯವಾಗಿದ್ದು, ಇವರನ್ನು ಉಪ್ಪಿನಂಗಡಿ ಶ್ರೀರಾಮ ಶಾಲೆಯ ಪೋಷಕರ ಸಂಘದ ಅಧ್ಯಕ್ಷ ಕರುಣಾಕರ ಸುವರ್ಣರವರು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಯು.ಜಿ ರಾಧಾರವರು ಆರೋಗ್ಯವಾಗಿದ್ದು ಯಾವುದೇ ಅಪಾಯ ಉಂಟಾಗಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.