ಉಡುಪಿ: ಯುವಕರ ಜೊತೆ ಕ್ರಿಕೆಟ್ ಆಡಿದ ಜಿಲ್ಲಾಧಿಕಾರಿ ಜಿ.ಜಗದೀಶ್

(ನ್ಯೂಸ್ ಕಡಬ) newskadaba.com ಉಡುಪಿ ನ. 20: ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಜನಸ್ನೇಹಿ ಡಿ.ಸಿ. ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಜಿ. ಜಗದೀಶ್ ನಿನ್ನೆ ಸ್ಥಳೀಯ ಯುವಕರ ಜೊತೆ ಕ್ರಿಕೆಟ್ ಆಡುವ ಮೂಲಕ ಯುವಕರನ್ನು ಖುಷಿ ಪಡಿಸಿದ್ದಾರೆ.

 

ಜಿಲ್ಲಾಸ್ಪತ್ರೆಯ ವೀಕ್ಷಣೆ ಸಂದರ್ಭ ಕೆಲ ಯುವಕರು ಕ್ರಿಕೆಟ್ ಆಡುತ್ತಿದ್ದರು. ಅಲ್ಲಿಗೆ ತೆರಳಿದ ಜಿಲ್ಲಾಧಿಕಾರಿ ಜಗದೀಶ್ ಯುವಕರ ಜೊತೆ ಕ್ರಿಕೆಟ್ ಆಡಿದ್ದಾರೆ. ಬ್ಯಾಟಿಂಗ್ ಮಾಡಿ ಬೌಂಡರಿ ಬಾರಿಸುವ ಮೂಲಕ ತಮ್ಮ ಯೌವನದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳ ದಿಢೀರ್ ಭೇಟಿ ಮತ್ತು ಕ್ರಿಕೆಟ್ ಆಟ ಸ್ಥಳೀಯ ಯುವಕರಲ್ಲಿ ಉತ್ಸಾಹ ಹೆಚ್ಚಿಸಿದೆ.

Also Read  ವ್ಯಕ್ತಿ ಜೀವನ ಬರಹ ಸ್ಪರ್ಧೆ ➤ ಕಡಬದ ದಿಲೀಪ್‌ ವೇದಿಕ್ ಪ್ರಥಮ

 

 

error: Content is protected !!
Scroll to Top